Breaking News

ರಾಜ್ಯ ಸರಕಾರ ಪೆಟ್ರೋಲ್, ಡೀಸೈಲ್ ದರ ಏರಿಕೆ ಮಾಡಿರುವ ಹಿನ್ನಲೆ ಬಿಜೆಪಿ ಪ್ರತಿಭಟನೆಯಲ್ಲಿ ಜಗದೀಶ ಶೆಟ್ಟರ ಭಾಗಿ.!

Spread the love

ರಾಜ್ಯ ಸರಕಾರ ಪೆಟ್ರೋಲ್, ಡೀಸೈಲ್ ದರ ಏರಿಕೆ ಮಾಡಿರುವ ಹಿನ್ನಲೆ ಬಿಜೆಪಿ ಪ್ರತಿಭಟನೆಯಲ್ಲಿ ಜಗದೀಶ ಶೆಟ್ಟರ ಭಾಗಿ.!


ಗೋಕಾಕ: ರಾಜ್ಯ ಸರಕಾರ ಪೆಟ್ರೋಲ್, ಡೀಸೈಲ್ ದರ ಏರಿಕೆ ಮಾಡಿರುವ ಹಿನ್ನಲೆ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಗುರುವಾರದಂದು ಮನವಿ ಸಲ್ಲಿಸಿದರು.

ಪೆಟ್ರೋಲ್, ಡೀಸೈಲ್ ದರ ಏರಿಕೆಯಿಂದ ವಾಹನ ಸವಾರರಿಗೆ ಮಾತ್ರ ಹೊರೆಯಾಗುವದಿಲ್ಲ ಇದು ಸರಕು ಸಾಗಾಣಿಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ಪ್ರಯಾಣದ ದರವು ಹೆಚ್ಚಲಿದೆ. ತರಕಾರಿ, ದಿನಿತ್ಯ ಗೃಹಬಳಕೆ ವಸ್ತುಗಳು, ದವಸ ಧಾನ್ಯಗಳು, ಕಟ್ಟಡ ಸಾಮಗ್ರಿಗಳ ಬೆಲೆಯೂ ಹೆಚ್ಚಲಿದೆ. ಇದರಿಂದ ರಾಜ್ಯದ ಜನರನ್ನು ಸಂಕಷ್ಟಕ್ಕೆ ತಳ್ಳಿದಂತಾಗುತ್ತದೆ. ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವ ಮೂಲಕ ನಾವು ಸರಕಾರ ನಡೆಸುತ್ತೇವೆ ಎಂದು ಹೋರಟಿರುವ ಕಾಂಗ್ರೇಸ್ ಸರಕಾರ ಜನರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಕೂಡಲೇ ಸರಕಾರ ಪೆಟ್ರೋಲ್, ಡೀಸೈಲ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ರಾಷ್ಟಿçÃಯ ಹಿಂದುಳಿದ ವರ್ಗಗಳ ಕರ‍್ಯಕಾರಿಣಿ ಸದಸ್ಯ ಲಕ್ಷö್ಮಣ ತಪಸಿ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮುಖಂಡರುಗಳಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಅಬ್ಬಾಸ ದೇಸಾಯಿ, ಬಸವರಾಜ ಆರೇನ್ನವರ, ರಾಜೇಶ್ವರಿ ಒಡೆಯರ, ಲಕ್ಕಪ್ಪ ಬಂಡಿ, ಮಂಜುನಾಥ ಮಾವರಕರ, ಅನೀಲ ತುರಾಯಿದಾರ, ಆನಂದ ಉಳ್ಳಾಗಡ್ಡಿ, ಮಂಜು ಪ್ರಭುನಟ್ಟಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!!

Spread the loveನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!! ಗೋಕಾಕ: ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು …

Leave a Reply

Your email address will not be published. Required fields are marked *

five × 5 =