ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!
ಗೋಕಾಕ: ಅಧಿಕಾರಿಗಳು ನದಿ ತೀರದ ಜನವಸತಿ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಪಶ್ಚಿಮ ಘಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನಲೆ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ರವಿವಾರದಂದು ಸಂಭವನೀಯ ಪ್ರವಾಹ ಮುನ್ನೇಚ್ಚರಿಕೆಯ ಕುರಿತು ಕಂದಾಯ ಇಲಾಖೆ, ತಾಲೂಕ ಪಂಚಾಯತ, ನಗರಸಭೆ, ಪಟ್ಟಣ ಪಂಚಾಯತ, ಲೋಕೋಪಯೋಗಿ, ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾತನಾಡಿ ಸಂಭನೀಯ ಪ್ರವಾಹ ನಿಯಂತ್ರಿಸಲು ಇಂದಿನಿAದಲೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.
ನಗರದಲ್ಲಿ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮವಾಗುವ ಹಿನ್ನಲೆಯಲ್ಲಿ ನದಿ ತೀರದ ಜನವಸತಿ ಪ್ರದೇಶಗಳಿಗೆ ಅಧಿಕಾರಿಗಳು ಹೆಚ್ಚಿನ ಗಮನವಹಿಸಿ, ಬಳ್ಳಾರಿ ನಾಲಾ ಮತ್ತು ಮಾರ್ಕಂಡೇಯ ನದಿ ನೀರು ಅಂಕಲಗಿ ಕುಂದರಗಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆ ನಿರಂತರವಾಗಿ ಸುರಿದೆ ಪ್ರವಾಹ ಪರಿಸ್ಥಿತಿ ತೆಲೆದೊರಬಹುವದು ಹೀಗಾಗಿ ಜನರು ಮತ್ತು ಜಾನುವಾರುಗಳ ಸುರಕ್ಷತೆಗೆ ಕ್ರಮವಹಿಸಿ, ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ರೋಗ ರುಜುನಿಗಳು ಹರಡುವ ಸಾಧ್ಯತೆ ಹೆಚ್ಚಿದ್ದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ಗಮನವಹಿಸಿ ರೋಗ ಹರಡದಂತೆ ತಡೆಯುವಂತೆ ಕಾರ್ಯನಿರ್ವಹಿಸಿ ಎಂದರು.
ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚುತ್ತಿದ್ದು ರಸ್ತೆಗಳಲ್ಲಿ ಗುಂಡಿಗಳು ಮಾರ್ಪಾಡಾಗುತ್ತಿದ್ದು ಅಧಿಕಾರಿಗಳು ಅವುಗಳನ್ನು ಮುಚ್ಚಿಸುವ ಕಾರ್ಯಮಾಡಬೇಕು. ಈಗಾಗಲೇ ಮಾರ್ಕಂಡೇಯ ನದಿ ಮತ್ತು ಘಟಪ್ರಭಾ ನದಿಗೆ ಜಲಾಶಯಗಳಿಂದ ನೀರು ಹರಿ ಬಿಡುತ್ತಿದ್ದು ಘಟಪ್ರಭೆ ನದಿ ತುಂಬಿ ಹರಿಯುತ್ತಿದೆ. ಸದ್ಯಕ್ಕೆ ಯಾವುದೇ ಪ್ರವಾಹದ ಆತಂಕವಿಲ್ಲ ಮತ್ತು ಭಯ ಪಡುವ ಅಗತ್ಯವಿಲ್ಲ. ಮಳೆಯ ಪ್ರಾಮಾಣ ಹೆಚ್ಚಾದಲ್ಲಿ ಪ್ರವಾಹ ಸಂಭವಿಸುವ ಸೂಚನೆ ಇದ್ದು ನದಿ ತಟದ ಜನರು ತಮ್ಮ ಹಾಗೂ ಜಾನುವಾರುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಮತ್ತು ನದಿ ನೀರು ತುಂಬಿ ಹರಿಯುತ್ತಿರುವ ಸೇತುವೆಗಳಲ್ಲಿ ವಾಹನಗಳನ್ನು ಚಲಾಯಿಸುವ ಮೊಂಡುಧೈರ್ಯ ಮಾಡದಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂಧಿ ವರ್ಗದವರು ಇತರರು ಉಪಸ್ಥಿತರಿದ್ದರು.