ಕು.ತೇಜೋಮಯಿ ಗದ್ದಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ.!
ಬೆಂಗಳೂರು: ಭಗವಾನ ಪ್ರಸನ್ನ ಗುರೂಜಿಯವರ ವೇಕ್ ಅಪ್ ಇಂಡಿಯಾ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಸಾಧಕ ರತ್ನ ಪ್ರಶಸ್ತಿಯನ್ನು ಹಂಪಿನಗರದ ಶ್ರೀ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ತೇಜೋಮಯಿ ಗದ್ದಿ ಅವರಿಗೆ ಬೆಂಗಳೂರಿನ ಹಂಪಿನಗರದ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತೆಗೆ ಬೆಂಗಳೂರಿನ ಚೋಳರಪಾಳ್ಯದ ಶಿವಲೀಲಾ ಡ್ಯಾನ್ಸ್ ಮತ್ತು ಮ್ಯೂಸಿಕ್ ಅಕಾಡೆಮಿ ತರಬೇತುದಾರರಾದ ವಿದೂಶಿ ನೇತ್ರಾವತಿ ಮಂಜುನಾಥ ಮಾರ್ಗದರ್ಶನ ನೀಡಿದ್ದಾರೆ. ಶ್ರೀ ಭಾರತಿ ವಿದ್ಯಾಲಯದ ಮುಖ್ಯೋಪಾಧ್ಯಯರು, ಶಿಕ್ಷಕರು ಸೇರಿದಂತೆ ಶಾಲಾ ಆಡಳಿತ ಮಂಡಳಿ ಸೇರಿದಂತೆ ಸಿಬ್ಬಂದಿ ಅಭಿನಂದಿಸಿದ್ದಾರೆ.