ಓಮಾನ್‌ನ ರಸ್ತೆ ಅಪಘಾತ ಗೋಕಾಕ ಮೂಲದ ನಾಲ್ವರ ಸಾವು-ಕೇಂದ್ರ ಸಚಿವರೊಂದಿಗೆ ನಿರಂತರ ಸಂರ್ಪಕದಲ್ಲಿ ಶಾಸಕ ರಮೇಶ ಜಾರಕಿಹೊಳಿ!
ಗೋಕಾಕ: ವಿಸಿಟಿಂಗ್ ವಿಸಾದ ಮೇಲೆ ದುಬೈಗೆ ತೆರಳಿದ್ದ ತಾಯಿ ಮಗ ಹಾಗೂ ಮಗಳು ಅಳಿಯ ಹೈಮಾಕ ಪ್ರದೇಶದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಸೋಮವಾರದಂದು ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತರು ಗೋಕಾಕ ನಿವಾಸಿಗಳಾದ ವಿಜಯಾ ಮಾಯಪ್ಪ ತಹಶೀಲದಾರ 52, ಪವನಕುಮಾರ ಮಾಯಪ್ಪ ತಹಶೀಲದಾರ 22, ಪೂಜಾ ಆದಿಶೇಷ ಉಪ್ಪಾರ 21, ಆದಿಶೇಷ ಬಸವರಾಜ ಉಪ್ಪಾರ 35 ರಸ್ತೆ ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಆದಿಶೇಷ ಹಾಗೂ ಪೂಜಾ ದಂಪತಿ ದುಬೈನ ಸಲಾಲಾನಲ್ಲಿ ನೆಲೆಸಿದ್ದು, ಸಾಲಾಲಾನಲ್ಲಿ ನೆಲೆಸಿದ್ದ ಗರ್ಭಿಣಿ ಮಗಳನ್ನು ಸಿಮಂತ ಕಾರ್ಯಕ್ಕೆ ಕರೆತರಲು ದುಬೈಗೆ ತಾಯಿ ಮಗ ವಿಸಿಟಿಂಗ್ ವಿಸಾದ ಮೇಲೆ ದುಬೈಗೆ ತೆರಳಿದ್ದರು. ಸೋಮವಾರ ರಾತ್ರಿ ೧೦ಗಂಟೆಗೆ ಮೃತರು ಕಾರ್ ಮೂಲಕ ಸಾಲಾಲಾದಿಂದ ಮಸ್ಕತ್‌ಗೆ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಮೃತರ ಶರೀರವನ್ನು ಹೈಮಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಂತರ ಶವಾಗಾರದಲ್ಲಿ ಇರಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಗೆ ಸಂಭAಧಿಸಿದ ಕ್ರಮಗಳು ಪ್ರಗತಿಯಲ್ಲಿವೆ ಎಂದು ತಿಳಿದು ಬಂದಿದೆ. ಗೋಕಾಕ ನಗರದಲ್ಲಿರುವ ಮೃತರ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ.
–
ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಶಾಸ ರಮೇಶ ಜಾರಕಿಹೊಳಿ ಹಾಗೂ ಸಂಸದ ಜಗದೀಶ ಶೆಟ್ಟರ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಸಂಪರ್ಕಿಸಿ ಭಾರತೀಯ ರಾಯಭಾರ ಕಚೇರಿಯಲ್ಲಿರುವ ಎಲ್ಲ ರೀತಿಯ ನೆರವು ನೀಡಲು ಮನವಿ ಮಾಡಿದ್ದಾರೆ. ಅಲ್ಲದೇ ಶಾಸಕ ರಮೇಶ ಜಾರಕಿಹೊಳಿ ಅವರು ಇಬ್ಬರು ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅತಿಶೀಘ್ರದಲ್ಲಿ ಭಾರತಕ್ಕೆ ಮೃತದೇಹ ತರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.