ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ- ಡಾ.ಮೋಹನ ಭಸ್ಮೆ.!
ಗೋಕಾಕ: ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ ಎಂದು ತಹಶೀಲದಾರ ಡಾ.ಮೋಹನ ಭಸ್ಮೆ ಹೇಳಿದರು.
ಅವರು, ಗುರುವಾರದಂದು ನಗರದ ಶ್ರೀ ಮಹಾಲಕ್ಷಿö್ಮÃ ಸಭಾ ಭವನದಲ್ಲಿ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಂಡ ಡಾ.ಸರ್ವೇಪಲ್ಲಿ ರಾಧಾಕೃಷ್ಣನವರ ೧೩೭ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಶಿಕ್ಷಕರು ರಾಷ್ಟçನಿರ್ಮಾಣದ ಶಿಲ್ಪಿಗಳಾಗಿದ್ದಾರೆ. ಸಮಾಜದ ಅಂದಕಾರ ಮೌಢ್ಯಗಳನ್ನು ದೂರಮಾಡಿ ಸಂಸ್ಕಾರ ಸಂಸ್ಕೃತಿಯ ಬೆಳಕನ್ನು ಬೆಳಗಿಸಬಲ್ಲ ಶಕ್ತಿ ಶಿಕ್ಷಕರಿಗೆ ಮಾತ್ರ ಇರುತ್ತದೆ. ಮಕ್ಕಳಲ್ಲಿಯ ಅಜ್ಞಾನವನ್ನು ದೂರ ಮಾಡಿ ಅವರನ್ನು ಜ್ಞಾನದ ಬೆಳಕಿನತ್ತ ಕೊಂಡೊಯ್ದು ಅವರಲ್ಲಿ ಸಮರ್ಥ ನಾಯಕತ್ವ ಗುಣಗಳನ್ನು ಬೆಳೆಸಬಲ್ಲ ವ್ಯಕ್ತಿ ಗುರುವಾಗಿದ್ದು ಅದಕ್ಕಾಗಿ ಆದರ್ಶ ಶಿಕ್ಷಕ ಡಾ.ಸರ್ವೇಪಲ್ಲಿ ರಾಧಾಕೃಷ್ಣನರವರ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ರಾಷ್ಟçದಾಧ್ಯಂತ ಆಚರಿಸುತ್ತಿರುವದು ಹೆಮ್ಮೆಯ ವಿಷಯ ಎಂದ ಅವರು, ಕ್ಷೇತ್ರದಲ್ಲಿ ಶಾಸಕರುಗಳ ಸಹಕಾರ, ಸರಕಾರದ ಯೋಜನೆಗಳ ಸದುಪಯೋಗದಿಂದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಕರೆ ನೀಡಿದರು.
ಸಮಾರಂಭವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ಮುಂಜಾನೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಚಿತ್ರದೊಂದಿಗೆ ಬಸವೆಶ್ವರ ವೃತ್ತದ ಮೂಲಕ ಸಮಾರಂಭದ ವೇದಿಕೆಯ ವರೆಗೆ ಮೆರವಣಿಗೆ ನಡೆಸಲಾಯಿತು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಕ್ರೀಯಾಶೀಲ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಎಸ್ ಬಿ ಕುಡುಒಕ್ಕಲಿಗ, ಡಾ.ಮೋಹನ ಕಮತ, ಎ ಬಿ ಮಲಬನ್ನವರ, ಎಫ್ ಮೇಟಿ, ಎಮ್ ಎಮ್ ನದಾಫ, ಬಸವರಾಜ ಮಾಲದಿನ್ನಿ, ಎಸ್ ವಿ ಕುಲಕರ್ಣಿ, ಇಮ್ರಾನಬೇಗ ಮುಲ್ಲಾ, ಬಸವರಾಜ ಮುರಗೋಡ, ಎಲ್ ಕೆ ತೋರಣಗಟ್ಟಿ, ಜೀಯಾ ಸನದಿ, ಎಮ್ ಎಮ್ ಕುಡೋಲಿ, ಮಹಾದೇವಿ ಬಾಗೆನ್ನವರ, ಎನ್ ಎಸ್ ಬಾಗಡಿ ಇದ್ದರು.