Breaking News

ಖೋಟಾ ನೋಟು ಚಲಾವಣೆ ಮಾಡಲು ಪ್ರಯತ್ನಸುತ್ತಿದ್ದವರನ್ನು ಬಂಧಿಸಿದ ಗೋಕಾಕ ಪೋಲಿಸರು.!

Spread the love

ಖೋಟಾ ನೋಟು ಚಲಾವಣೆ ಮಾಡಲು ಪ್ರಯತ್ನಸುತ್ತಿದ್ದವರನ್ನು ಬಂಧಿಸಿದ ಗೋಕಾಕ ಪೋಲಿಸರು.!


ಗೋಕಾಕ: ಖೋಟಾ ನೋಟು ಚಲಾವಣೆ ಮಾಡಲು ಪ್ರಯತ್ನಸುತ್ತಿದ್ದವರನ್ನು ತಾಲೂಕಿನ ಕಡಬಗಟ್ಟಿ ಗ್ರಾಮದ ಬಳಿ ಬಂಧಿಸಲು ಗೋಕಾಕ ಪೋಲಿಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಅರಭಾಂವಿ ಗ್ರಾಮದ ಅನ್ವರ ಮಹ್ಮದಸಲೀಂ ಯಾದವಾಡ 26, ಮಹಾಲಿಂಗಪೂರ ಗ್ರಾಮದ ಸದ್ದಾಂಮುಸಾ ಯಡಹಳ್ಳಿ 22, ರವಿ ಚೆನ್ನಪ್ಪ ಹ್ಯಾಗಾಟಿ 27, ದುಂಡಪ್ಪ ಮಹಾದೇವ ಓಣಶೆನವಿ 27, ವಿಠ್ಠಲ ಹನಮಂತ ಹೊಸಕೋಟಿ 29 ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳು 1೦೦ ರೂಪಾಯಿ, 5೦೦ ರೂಪಾಯಿ ಮುಖಬೆಲೆಯ ಖೊಟಾ ನೋಟುಗಳನ್ನು ತಯಾರಿಸಿ ಅವುಗಳನ್ನು ಸಾರ್ವಜನಿಕರಿಗೆ 1ಲಕ್ಷ ಅಸಲಿ ನೋಟಿಗೆ ೪ಲಕ್ಷ ಖೊಟಾ ನೋಟುಗಳನ್ನು ನೀಡಿ ಅವುಗಳ ಚಲಾವಣೆ ಮಾಡಲು ಕಡಬಗಟ್ಟಿ ಗ್ರಾಮದ ಬಳಿ ಪ್ರಯತ್ನಿಸುತ್ತಿದ್ದರು. ಆರೋಪಿತರಿಂದ ಒಂದು ಕಾರ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಶನಿವಾರದಂದು ಪ್ರಕರಣ ದಾಖಲಾಗಿದೆ.
ಸಿಪಿಐ ಗೋಪಾಲ ರಾಠೋಡ ನೇತ್ರತ್ವದಲ್ಲಿ ಈ ದಾಳಿ ನಡೆದಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೋಲಿಸರು ಜಾಲ ಬೀಸಿದ್ದಾರೆ.


Spread the love

About Yuva Bharatha

Check Also

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!!

Spread the loveನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!! ಗೋಕಾಕ: ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು …

Leave a Reply

Your email address will not be published. Required fields are marked *

nine + 11 =