ಗೋಕಾಕ: ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗುರುವಾರ ದಂದು ನಗರ ಸೇರಿ ತಾಲೂಕಿನಲ್ಲಿ ೩೪ ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವೈದ್ಯಾಧಿಕಾರಿ ಡಾ.ಜಗದೀಶ್ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಅವರು, ಗೋಕಾಕ ನಗರ ಸೇರಿ ತಾಲೂಕಿನಾಧ್ಯಂತ ಕರೋನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ದಿನ ೩೪ ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲೂ ಗೋಕಾಕ ನಗರದಲ್ಲಿ ಕರೋನಾ ಸೋಂಕಿತರ ಸಂಖ್ಯೆ ೨೫, ಬೆಂಚಿನಮರಡಿ ೧, ಕನಸಗೇರಿ ೧, ಅಂಕಲಗಿ ೧, ಘಟಪ್ರಭಾ ೧, ಲೋಳಸುರ ೧, ನಲ್ಲಾನಟ್ಟಿ ೧, ಮೂಡಲಗಿ ೧, ಸುಳದಾಳ ೧, ಕೌಜಲಗಿ ೧ ಸೇರಿ ಒಟ್ಟು ೩೪ ಸೋಂಕಿತ ಪ್ರಕರಣ ದಾಖಲಾಗಿª. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಮನೆ ಸುತ್ತಮುತ್ತ ಪ್ರದೇಶಗಳನ್ನು ಸಿಲಡೌನ್ ಮಾಡಲಾಗಿದೆ ಎಂದು ಡಾ. ಜಿಂಗಿ ತಿಳಿಸಿದ್ದಾರೆ.