ಮತ್ತೆ ಕಾಂಗ್ರೇಸ್‌ನಿ0ದ ಹಣ ಹಂಚಿಕೆ ಆರೋಪ-ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ.!
ಗೋಕಾಕ: ಕಳೆದ ಎರಡು ದಿನಗಳ ಹಿಂದಷ್ಟೇ ಕಾಂಗ್ರೇಸ್ ಅಭ್ಯರ್ಥಿಪರ ಹಣ ಹಂಚಿಕೆ ಆರೋಪ ಹಿನ್ನಲೆ ಅಂಕಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಸೋಮವಾರದಂದು ಮಧ್ಯಾಹ್ನ ಮತ್ತೆ ಹಣ ಹಂಚಿಕೆಯಲ್ಲಿ ತೋಡಗಿದ್ದವರನ್ನು ಪೋಲಿಸ್‌ರ ವಶಕ್ಕೆ ನಿಡಲು ಮುಂದಾಗಿದ್ದಾಗ ಪೋಲಿಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರ ಹಣ ಹಂಚುವ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಸೇರಿ ಕೆಲವರನ್ನು ನಗದು ಹಣದ ಸಮೇತವಾಗಿ ಪೋಲಿಸರ ವಶಕ್ಕೆ ಬಿಜೆಪಿ ಕಾರ್ಯಕರ್ತರು ನೀಡಲು ಪೋಲಿಸರಿಗೆ ವಿಷಯ ತಿಳಿಸಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲು ಮುಂದಾಗಿಲ್ಲ ಅಲ್ಲದೇ ಚುನಾವಣಾ ಅಧಿಕಾರಿಗಳ ತಂಡವು ಸಹ ಗ್ರಾಮಸ್ಥರು ಹಣದ ಬಗ್ಗೆ ಮಾಹಿತಿ ನೀಡಿದ್ದರು ಅವರು ಸಹ ಹಣ ಹಂಚುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.
ಗೋಕಾಕ ಕಾಂಗ್ರೇಸ್ ಮುಖಂಡ ಡಾ.ಮಹಾಂತೇಶ ಕಡಾಡಿ ಹಾಗೂ ಸಂಗಡಿಗರ ಮೇಲೆ ಈಗಾಗಲೇ ಹಣ ಹಂಚಿಕೆ ಆರೋಪದಲ್ಲಿ ದೂರು ದಾಖಲಾಗಿದ್ದು ಚುನಾವಣಾ ಅಧಿಕಾರಿಗಳು ಅಕ್ಕತಂಗೇರಹಾಳದಲ್ಲಿ ಡಾ.ಮಹಾಂತೇಶ ಕಡಾಡಿ ಹಾಗೂ ಸಂಗಡಿಗರನ್ನು ಗ್ರಾಮಸ್ಥರು ಘೇರಾವ್ ಹಾಕಿ ಸ್ಥಳಕ್ಕೆ ಪೋಲಿಸ್ ಮತ್ತು ಚುನಾವಣಾ ಇಲಾಖೆ ಸಿಬ್ಬಂಧಿ ಬಂದರು ಸಹ ಯಾವುದೇ ಕ್ರಮಕೈಗೊಳ್ಳದಿರುವದು ಅನುಮಾನ ಮೂಡಿಸಿದೆ ಎಂದು ಗ್ರಾಮಸ್ಥರು ವಾಹಿನಿಗೆ ತಿಳಿಸಿದ್ದಾರೆ.