Breaking News

8.ಮೇಕೆಗಳ ಕಳ್ಳತನ, ಕಳ್ಳರ ಕೈಚಳಕ ಸಿಸಿ ಟಿವಿಲಿ ಸೆರೆ.!

Spread the love

8.ಮೇಕೆಗಳ ಕಳ್ಳತನ, ಕಳ್ಳರ ಕೈಚಳಕ ಸಿಸಿ ಟಿವಿಲಿ ಸೆರೆ.!


ಗೋಕಾಕ: ತಾಲೂಕಿನ ಎರಡು ಹಳ್ಳಿಗಳಲ್ಲಿ ಒಂದೇ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಸುಮಾರು 8 ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದ್ದು ಕಳ್ಳರ ಕೈಚಳಕ ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿವೆ.
ತಾಲೂಕಿನ ಹುಲಿಕಟ್ಟಿ, ಹನಮಾಪೂರ ಗ್ರಾಮಗಳಲ್ಲಿ ಈ ಘಟನೆ ನಡೆಸಿದ್ದು, ಹುಲಿಕಟ್ಟಿ ಗ್ರಾಮದ ರಾಮಸಿದ್ಧ ಫಕೀರಪ್ಪ ನಾಗನೂರ ಎಂಬವರಿಗೆ ಸೇರಿದ 2 ಮೇಕೆಗಳು, ಮತ್ತೋರ್ವರ  ಮೇಕೆ ಸೇರಿ ಒಟ್ಟು 3 ಮೇಕೆಗಳು, ಹನಮಾಪುರ ಗ್ರಾಮದಲ್ಲಿ 5 ಮೇಕೆಗಳು ಒಟ್ಟಾರೆಯಾಗಿ ಅಂದಾಜು 8 ಮೇಕೆಗಳು ಒಂದೆ ರಾತ್ರಿಯಲ್ಲಿ ಕಳ್ಳತನವಾಗಿದೆ.
ಪದೇ ಪದೇ ಇಂತಹ ಘಟನೆಗಳು ಗ್ರಾಮಗಳಲ್ಲಿ ನಡೆಯುತ್ತಿದ್ದು ಆದಷ್ಟು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆ ಗೋಕಾಕ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಕೃಷಿ ಜೊತೆಗೆ ಮೇಕೆ ಸಾಕಾಣಿಕೆ ಮಾಡುತ್ತಿದ್ದ ರೈತರು ಒಂದೇ ರಾತ್ರಿಯಲ್ಲಿ ನಡೆದಿರುವ ಕಳ್ಳತನದಿಂದ ರೈತರು ಸಾಕಷ್ಟು ಆತಂಕಗೊ0ಡಿದ್ದಾರೆ. ಜೊತೆಗೆ ಜೀವನೋಪಾಯಕ್ಕಾಗಿ ಸಾಕಾಣಿಕೆ ಮಾಡಿದ್ದ ಮೇಕೆಗಳು ಕಳುವಾಗಿರೋದು ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.


Spread the love

About Yuva Bharatha

Check Also

ಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ.

Spread the loveಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ. ಗೋಕಾಕ: ತಾಲೂಕಿನ ಮಾಲದಿನ್ನಿ ಮತ್ತು …

Leave a Reply

Your email address will not be published. Required fields are marked *

fifteen + 12 =