6ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ.!
ಗೋಕಾಕ: ನಾಡದೇವಿ ಭುವನೇಶ್ವರಿ ಹಾಗೂ ಗೋಕಾಕ ತಾಲೂಕ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಶಾಸಕ ರಮೇಶ ಜಾರಕಿಹೊಳಿ ಅವರು ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ಬೆಟಗೇರಿ ಗ್ರಾಮದ ಬಸವೇಶ್ವರ ವೃತ್ತದಿಂದ ಹರಟ ಮೆರವಣಿಗೆ ಶ್ರೀ ಬಸವರಾಜ ಕಟ್ಟಿಮನಿ, ಶ್ರೀ ಕೃಷ್ಣಮೂರ್ತಿ ಪುರಾಣಿಕ, ಪ್ರೋ. ಕೆ ಜಿ ಕುಂದಣಗಾರ, ಡಾ. ಸಿ ಚ ನಂದಿವ್ಮಠ, ರ‍್ಯಾ.ಡಿ ಸಿ ಪಾವಟೆ, ಶ್ರೀ ಬಿ ಬಿ ಮಮದಾಪುರ ಮಹಾದ್ವಾರಗಳಲ್ಲಿ ಕುಂಬ ಮೇಳ, ಡೊಳ್ಳು ಕುಣಿತ, ವೀರಗಾಸೆ, ಹುಲಿ ಮತ್ತು ಗೊಂಬೆಗಳ ವೇಷ, ಅಲಂಕೃತ ಒಂಟೆ, ಕುದುರೆಗಳ ಕುಣಿತ, ರೂಪಕಗಳು ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ಸಾಗಿ ವ್ಹಿ ವ್ಹಿ ದೇಯನ್ನವರ ಪ್ರೌಢಶಾಲೆಯಲ್ಲಿ ನಿರ್ಮಿಸಲಾದ ಆನಂದಕAದ ಡಾ. ಬೆಟಗೇರಿ ಕೃಷ್ಣಶರ್ಮ ಪ್ರಧಾನ ವೇದಿಕೆಗೆ ತಲುಪಿತು.
ಮೆರವಣಿಗೆಯಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಗ್ರಾಪಂ ಅಧ್ಯಕ್ಷೆ ಸಾಂವಕ್ಕ ಬಾಣಸಿ, ಉಪಾಧ್ಯಕ್ಷ ಶಿವನಪ್ಪ ಮಾಳೇದ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲೂಕಾಧ್ಯಕ್ಷೆ ಭಾರತಿ ಮದಭಾವಿ ಸೇರಿದಂತೆ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಸಾವಿರಾರು ವಿದ್ಯಾರ್ಥಿಗಳು, ಕನ್ನಡ ಮನಸ್ಮ್ಸಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ಇದಕ್ಕೂ ಮುಂಚೆ ಎಳಿಗ್ಗೆ ೮ಗಂಟೆಗೆ ನಿವೃತ್ತ ಗ್ರಾಮ ಲೆಕ್ಕಿಗ ಪತ್ರೆಪ್ಪ ನೀಲಣ್ಣವರ ರಾಷ್ಟçಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಪರಿಷತ್ತು ಧ್ವಜ ಹಾಗೂ ತಾಲೂಕಾಧ್ಯಕ್ಷೆ ಭಾರತಿ ಮದಭಾವಿ ನಾಡ ಧ್ವಜಾರೋಹಣ ನೆರವೇರಿಸಿದರು.