ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದೆ- ಅಂಬಿರಾವ ಪಾಟೀಲ.!
ಗೋಕಾಕ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಕಾಲಕಾಲಕ್ಕೆ ಅಗತ್ಯ ಸಾಲ ನೀಡುವ ಮೂಲಕ ರೈತರ ಜೀವನಾಡಿಯಾಗಿದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಅವರು, ಗುರುವಾರದಂದು ತಾಲೂಕಿನ ನಂದಗಾAವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಸಹ ರೈತರು ಸಹಕಾರ ಸಂಘಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ ಎಂದರು.
ಕೃಷಿ ಪತ್ತಿನ ಸಹಕಾರಿ ಸಂಘದಿAದ ಸಾಲ ಪಡೆಯುವ ರೈತರು ಹೈನುಗಾರಿಕೆ ಹಾಗೂ ನೀರಾವರಿ ಸೇರಿದಂತೆ ಇನ್ನಿತರ ಚಟುವಟಿಕೆಗೆ ಹಣ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವಚಿತೆ ಕರೆ ನೀಡಿದರು.
ಇದೆ ಸಂದರ್ಭದಲ್ಲಿ ನಂದಗಾAವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರುಗಳು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಆತ್ಮೀಯವಾಗಿ ಸತ್ಕರಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾವಳಗಿಯ ಶ್ರೀ ಜಗದ್ಗುರು ಶಿವಲಿಂಗೇಶ್ವರ ಮಹಾಸನ್ನಿಧಿಯವರು ವಹಿಸಿದ್ದರು.
ವೇದಿಕೆಯ ಮೇಲೆ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸಂಘದ ಅಧ್ಯಕ್ಷ ಶಿವಲಿಂಗಪ್ಪ ಶಿರಗಾಂವಿ, ಉಪಾಧ್ಯಕ್ಷ ಶಿವಲಿಂಗಪ್ಪ ಕೊಟಬಾಗಿ, ಬಿಡಿಸಿಸಿ ಬ್ಯಾಂಕ ನಿಯಂತ್ರಣಾಧಿಕಾರಿ ಎಮ್ ಎಮ್ ಕುರಬೇಟ, ಜಿ ಎಮ್ ಪಾಟೀಲ, ಎಸ್ ಕೆ ಅಳಗುಂಡಿ, ಮಣಿ ಎಮ್ ಎಸ್, ಎನ್ ಎಫ್ ಕಲಾವಚಿತ, ಎನ್ ಎನ್ ಸರಾಫ, ಎಷ್ ಸಿ ಬಸವರಾಜ, ಶಿವನಗೌಡ ಪಾಟೀಲ, ಭೀಮಸೇನ ಗೋಖಲೆ, ಕೃಷಿ ಅಧಿಕಾರಿ ಎಮ್ ಎಮ್ ನದಾಫ ಸೇರಿದಂತೆ ಇತರರು ಇದ್ದರು.