ಜೈನರ ತೀರ್ಥ ಕ್ಷೇತ್ರವಾದ ಸಿದ್ಧಕ್ಷೇತ್ರ ಸಮ್ಮೇದ ಶಿಖರಜಿ ಹಾಗೂ ಪಾಲಿಠಾಣ ಕ್ಷೇತ್ರವನ್ನು ರಕ್ಷಿಸಲು ಮನವಿ.!
ಗೋಕಾಕ: ಕೇಂದ್ರ ಸರಕಾರ ಹಾಗೂ ಜಾರ್ಖಂಡ ಸರಕಾರದವರು ಜೈನರ ತೀರ್ಥ ಕ್ಷೇತ್ರವಾದ ಸಿದ್ಧಕ್ಷೇತ್ರ ಸಮ್ಮೇದ ಶಿಖರಜಿ ಹಾಗೂ ಪಾಲಿಠಾಣ ಕ್ಷೇತ್ರವನ್ನು ವಣ್ಯ ಜೀವಿ ಅಭಯಾರಣ್ಯ, ಪ್ರವಾಸೋದ್ಯಮ ಮತ್ತು ಧಾರ್ಮಿಕೇತರ ಚಟುವಟಿಕೆಗಳಿಗೆ ಅನುಮತಿ ನೀಡಿರುವದನ್ನು ವಿರೋಧಿಸಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಜೈನ ಸಮಾಜ ಶ್ರಾವಕ ಶ್ರಾವಕಿಯರು ಬಧವಾರದಂದು ನಗರದ ಬಸವೇಶ್ವರ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಹಾಗೂ ಜಾರ್ಖಂಡ ಸರಕಾರ ಜೈನ ತೀರ್ಥ ಕ್ಷೇತ್ರವನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ನೀಡುವ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಬೇಕು. ಈ ನಿರ್ಧಾರ ಜೈನ ಸಮಾಜಕ್ಕೆ ಮಾರಕವಾಗಲಿದ್ದು, ಸಂಪೂರ್ಣ ಜೈನ ಧರ್ಮ ಮತ್ತು ಸಮಾಜದ ಅವನತಿಗೆ ಕಾರಣವಾಗಲಿದೆ. ತೀರ್ಥ ಕ್ಷೇತ್ರ ಸಮ್ಮೇದ ಶಿಖರಜಿಯ ಪಾವಿತ್ರತೆಯನ್ನು ಉಳಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಆಚಾರ್ಯರಾದ ಶ್ರೀ ಸಚ್ಚಿದಾನಂದಿ ಮಹಾರಾಜರು, ಶ್ರೀ ಧೈರ್ಯನಂದಿ ಮಹಾರಾಜರು, ರಿದ್ಧಿ ಶ್ರೀ ಮಾತಾಜಿ, ಧರ್ಮಮತಿ ಮಾತಾಜಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಗೋಕಾಕ ಮತ್ತು ಮೂಡಲಗಿ ತಾಲೂಕಿನ ಜೈನ ಸಮಾಜದ ಮುಖಂಡರು, ವಾಗೀಶ್ವರಿ ಮಹಿಳಾ ಮಂಡಳ ಮತ್ತು ಶ್ರೀ ಸುಪಾರ್ಶ್ವನಾಥ ಯುವ ಫೇಡೇಷನ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.