ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಜ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.!
ಗೋಕಾಕ: ಅಸಂವಿಧಾನಕ ಹಾಗೂ ಅವ್ಶೆಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ಸದಾಶಿವ ಆಯೋಗದ ವರದಿ ಜಾರಿಗೊಳಿಸುವದನ್ನು ವಿರೋಧಿಸಿ ಜ.೧೦ರಂದು ಬೆಂಗಳೂರಿನ ಮೆಜೆಸ್ಟಿಕ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳಗಾವಿ ಜಿಲ್ಲಾ ಭೋವಿ ಸೋಶಿಯಲ್ ವೇಲ್ಪೇರ್ ಸೋಸೈಟಿಯ ಅಧ್ಯಕ್ಷ ಲಕ್ಷö್ಮಣ ಗಾಡಿವಡ್ಡರ ಹೇಳಿದರು.
ಅವರು, ಶನಿವಾರದಂದು ಸಂಜೆ ನಗರದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದಾಶಿವ ಆಯೋಗ ವರದಿ ಜಾರಿಯಿಂದ ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಈ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಿ ಈ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಈ ವರದಿ ಜಾರಿಗೊಳಿಸದಂತೆ ಬೆಂಗಳೂರಿನಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಶೋಕ ಭಜಂತ್ರಿ, ಎಮ್ ಬಿ ಭಜಂತ್ರಿ, ಅಶೋಕ ಬಂಡಿವಡ್ಡರ, ರಾಜು ಭಜಂತ್ರಿ, ಭರಮಣ್ಣ ಗಾಡಿವಡ್ಡರ, ಬಸವರಾಜ ಭಜಂತ್ರಿ, ವೆಂಕಪ್ಪ ಭಜಂತ್ರಿ, ಪರಶುರಾಮ ಗಾಡಿವಡ್ಡರ, ತಮ್ಮಣ್ಣ ಬಂಡಿವಡ್ಡರ, ಸತ್ತೆಪ್ಪ ಭಜಂತ್ರಿ, ರವಿ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.