ಶ್ರೀ ಸರಸ್ವತಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!
ಗೋಕಾಕ: ತಾಲೂಕಿನ ಅಂಕಲಗಿ ಪಟ್ಟಣದ ಕೆಜೆಎಸ್ ಸಂಘದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ, ಎಸ್‌ಎ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರೀ ಸರಸ್ವತಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ವೈದ್ಯ ಹುದ್ದೆ ಅಲಂಕರಿಸಿದ ಸಾಧಕರಿಗೆ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ, ಆದರ್ಶ ಗೋಖಲೆ, ಪಿ ಬಿ ದುಡಗಂಟಿ, ಎಮ್ ಎಲ್ ಹಂಜಾಟೆ, ಡಿಎಸ್‌ಪಿ ಮನೋಜಕುಮಾರ ನಾಯ್ಕ, ಕ್ಷೇತ್ರಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಡಾ.ಮಹೇಶ ಶೆಟ್ಟೆನ್ನವರ, ಡಾ.ಸಚಿಜಯ ಪಾಶ್ಚಾಪೂರೆ, ಡಾ.ಸಚೀನಕುಮಾರ ಪಾಟೀಲ, ಡಾ.ಕಿರಣ ಉರುಬಿನಹಟ್ಟಿ, ಡಾ.ಶಿವಾನಂದ ಮಲಕುರಿ ಸೇರಿದಂತೆ ಅನೇಕರು ಇದ್ದರು.