ಭಾರಿ ಮಳೆಯಿಂದಾಗಿ ಹಳ್ಳದ ನೀರಲ್ಲಿ ಕೊಚ್ಚಿ ಹೋದ ಯುವಕ.!

ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನ ಕೊಳವಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಲ್ಲಿ ಯುವಕನೋರ್ವ ಕೊಚ್ಚಿ ಹೋದ ಘಟನೆ ಜರುಗಿದೆ.
ದುಂಡಪ್ಪ ಮಾಲದಿನ್ನಿ 25 ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಯುವಕ ಎಂದು ಗುರುತಿಸಲಾಗಿದೆ. ಯುವಕ ದುಂಡಪ್ಪ ಹಳ್ಳದ ಪಕ್ಕದಲ್ಲಿರುವ ತಮ್ಮ ಜಮೀನಿಗೆ ಹಳ್ಳದ ಬ್ರೀಡ್ಜ ದಾಟುವಾಗ ಏಕಾಏಕಿ ಹಳ್ಳಕ್ಕೆ ಮಳೆಯ ನೀರು ಹರಿದು ಬಂದಿದ್ದು ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿ ಎಸ್ ಐ ನಾಗರಾಜ ಖಿಲಾರೆ ಭೇಟಿ ನೀಡಿದ್ದು, ಪೋಲಿಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
YuvaBharataha Latest Kannada News