Breaking News

ನಾವೆಲ್ಲರೂ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿ ಮಾಡಬೇಕು- ಡಾ.ಮೋಹನ ಭಸ್ಮೆ!!

Spread the love

ನಾವೆಲ್ಲರೂ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿ ಮಾಡಬೇಕು- ಡಾ.ಮೋಹನ ಭಸ್ಮೆ!!

ಗೋಕಾಕ: ಕನ್ನಡ ಮನಸ್ಸುಗಳು ಪ್ರತಿ ದಿನ ಕನ್ನಡ ಅಭಿಮಾನದಿಂದ ಕನ್ನಡ ಭಾಷೆಯನ್ನು ಬೆಳೆಸುವಂತೆ ತಹಶೀಲದಾರ ಡಾ.ಮೋಹನ ಭಸ್ಮೆ ಹೇಳಿದರು.
ಅವರು, ಶುಕ್ರವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನಾವೆಲ್ಲರೂ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿ ಮಾಡಬೇಕು. ಮೊದಲ ಆದ್ಯತೆ ಮಾತೃಭಾಷೆಗೆ ನೀಡಬೇಕು. ಕರ್ನಾಟಕದ ತಂತ್ರಜ್ಞಾನ ಆರ್ಥಿಕ ಸಾಮಾಜಿಕ ಸಾಹಿತ್ಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಬೇಕು ಎಂದ ಅವರು ಪ್ಲಾಸ್ಟೀಕ್ ಮುಕ್ತ ಭಾರತ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮಕ್ಕಿಂತ ಮೊದಲು ಭುವನೇಶ್ವರಿ ಭಾವಚಿತ್ರದೊಂದಿಗೆ ಕುಂಭಮೇಳ, ರೂಪಕಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ಸಾಹಿತ್ಯ ವಿಭಾಗದಲ್ಲಿ ಡಾ.ಅರ್ಜುನ ಪಂಗಣ್ಣವರ, ಕಲಾವಿದರ ವಿಭಾಗದಲ್ಲಿ ನಾಮದೇವ ಹರಿಜನ ಹಾಗೂ ವಿಶೇಷ ಪ್ರಶಸ್ತಿಯನ್ನು ಎಮ್ ಬಿ ನಾಟೇಕರ ಅವರಿಗೆ ಕನ್ನಡ ರಾಜ್ಯೋತ್ಸವ ತಾಲೂಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಸದಸ್ಯರುಗಳಾದ ಶ್ರೀಶೈಲ ಯಕ್ಕುಂಡಿ, ಬಾಬು ಮುಳಗುಂದ, ಸಿದ್ದಪ್ಪ ಹುಚ್ಚರಾಮಪ್ಪಗೋಳ, ಅಧಿಕಾರಿಗಳಾದ ಪರಶುರಾಮ ಘಸ್ತೆ, ಜಿ ಬಿ ಬಳಗಾರ, ರಮೇಶ ಜಾಧವ, ಕುಡುವಕ್ಕಲಿಗ, ಎಮ್ ಎಲ್ ಜನ್ಮಟ್ಟಿ, ಮುಖಂಡರುಗಳಾದ ಅಶೋಕ ಪೂಜಾರಿ, ಸೋಮಶೇಖರ ಮಗದುಮ, ಕನ್ನಡಪರ ಸಂಘಟನೆಗಳ ಪ್ರಮುಖರಾದ ಭಾರತಿ ಮದಬಾಂವಿ, ಕಿರಣ ಡಮಾಮಗರ, ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

five × five =