ಶಿಕ್ಷಣ ಒಂದು ತಪಸ್ಸು, ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಮುಂದಿನ ಜೀವನ0ವನ್ನು ಉಜ್ವಲಗೊಳಿಸುವಂತೆ- ಜಿ ಬಿ ಬಳಗಾರ!!
ಗೋಕಾಕ: ಶಿಕ್ಷಣ ಒಂದು ತಪಸ್ಸು, ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಮುಂದಿನ ಜೀವನ0ವನ್ನು ಉಜ್ವಲಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು.
ಅವರು, ಶನಿವಾರದಂದು ತಾಲೂಕಿನ ಖನಗಾಂವ ಗ್ರಾಮದ ಕರ್ನಾಟಕ ಪಬ್ಲೀಕ್ ಶಾಲೆಯ ಸನ್ 2021-22ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ 13 ಹೆಚ್ಚುವರಿ ಕೋಠಡಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಗೋಕಾಕ ಶೈಕ್ಷಣಿಕ ವಲಯದಲ್ಲಿ ಶಿಕ್ಷಕರಿಂದ ಹತ್ತು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಶಿಕ್ಷಣದ ಪ್ರಗತಿಗೆ ಗುರು ಬಳಗ ಶ್ರಮಿಸುತ್ತಿದೆ. ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಶಾಸಕ ರಮೇಶ ಜಾರಕಿಹೊಳಿ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ವಲಯದ ಕೀರ್ತಿ ಹೆಚ್ಚಿಸುವಂತೆ ಕರೆ ನೀಡಿದರು.
ಶಾಸಕ ರಮೇಶ ಜಾರಕಿಹೊಳಿ ಅವರು ೨ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ಹೆಚ್ಚುವರಿ ಕೋಠಡಿಗಳನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಗ್ರಾಪಂ ಅಧ್ಯಕ್ಷೆ ನಂದೆವ್ವಾ ಮಾಳಗಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅನೀಲಕುಮಾರ ಶಿಂಗೆ, ಕೆ ಪಿ ನಾಗಾಭರಣ, ರಾಜು ಉಜ್ಜಿನಕೊಪ್ಪ, ಅಶೋಕ ರುದ್ರಾಪೂರ, ಬಿ ಬಿ ದಾಸನವರ, ಪುಂಡಲೀಕ ವಣ್ಣೂರ, ನಿಂಗಪ್ಪ ವಣ್ಣಿಗೇರಿ, ನಿಂಗಪ್ಪ ಬುಳ್ಳಿ, ರಾಮಣ್ಣ ಪೂಜೇರಿ, ಮಂಜುನಾಥ ಚಿಚ್ಚಿ, ಸಿದ್ದನಗೌಡ ಪಾಟೀಲ, ಮಲ್ಲಪ್ಪ ಪಾಟೀಲ, ಚಂದ್ರಪ್ಪ ಗಸ್ತಿ, ಲಿಂಗನಗೌಡ ಪಾಟೀಲ, ಜಿಲ್ಲಾ ಯೋಜನಾಧಿಕಾರಿ ಹಿರೇಮಠ, ಶಂಕರ ನಾಯ್ಕ, ಬಸಪ್ಪ ಹಮ್ಮಿಣಿ, ರಾಮಪ್ಪ ಡಬ್ಬನವರ, ಚನ್ನಪ್ಪ ಬಾಗೋಜಿ ಸೇರಿದಂತೆ ಗ್ರಾಮಸ್ಥರು ಇದ್ದರು.