ಗೋಕಾಕನಲ್ಲಿ ಇಂಜನಿಯರಿ0ಗ್ ಕಾಲೇಜು ಪ್ರವೇಶಗಳು ಶೀಘ್ರದಲ್ಲಿ.!
ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ಭಾಗದ ಜನರ ಬಹುದಿನಗಳ ಕನಸಾಗಿದ್ದ ಇಂಜನಿಯರಿAಗ್ ಕಾಲೇಜು ನಗರದ ಬ್ಯಾಳಿ ಕಾಟಾ ಹತ್ತಿರದ ಎನ್‌ಎಸ್‌ಎಫ್ ಆವರಣದಲ್ಲಿ ಇಂಜನಿಯರಿ0ಗ್ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ.
ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದ ಪ್ರತಿಫಲವಾಗಿ ಈ ಇಂಜನಿಯರಿAಗ್ ಕಾಲೇಜು ಪ್ರಾರಂಭವಾಗಿದೆ. ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸರಕಾರಕ್ಕೆ ಪತ್ರ ಬರೆದು ಇಂಜನಿಯರಿAಗ್ ಕಾಲೇಜು ಗೋಕಾಕ ನಗರದಲ್ಲಿ ಪ್ರಾರಂಭಿಸುವAತೆ ಕೋರಿದ್ದರು. ಅದರಂತೆ ಸಚಿವ ಸತೀಶ ಜಾರಕಿಹೊಳಿ ಅವರು ಸರಕಾರದ ಮೇಲೆ ಒತ್ತಡ ಹೇರಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾಲೇಜು ಘಟಕ ಗೋಕಾಕ ನಗರದಲ್ಲಿ ಪ್ರಾರಂಭವಾಗಲಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾಲೇಜು ಘಟಕ ಗೋಕಾಕನಲ್ಲಿ ಆರ್ಟಿಫಿಸಿಯಲ್ ಇಂಟಲಿಜೇನ್ಸ್, ಸೈಬರ್ ಸೇಕ್ಯುರಿಟಿ, ಇಲೆಕ್ಟಿçÃಕಲ್ ಇಂಜನಿಯರಿ0ಗ್ ವಿಭಾಗಗಳನ್ನು ಹೊಂದಿವೆ. 2025-26ನೇ ಸಾಲಿನಲ್ಲಿ ನುರಿತ ಶಿಕ್ಷಕ ಸಿಬ್ಬಂಧಿಯೊAದಿಗೆ ಪ್ರವೇಶಗಳು ಶೀಘ್ರದಲ್ಲೆ ಪ್ರಾರಂಭವಾಗಲಿವೆ.
ಇಂಜನಿಯರಿ0ಗ್ ವಿದ್ಯಾಭ್ಯಾಸಕ್ಕಾಗಿ ಗೋಕಾಕ ಹಾಗೂ ಮೂಡಲಗಿ ಭಾಗದ ಜನತೆ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿ ಇನ್ನಿತರ ಕಡೆಗಳಿಗೆ ಹೋಗುತ್ತಿದ್ದರು ಈಗ ಗೋಕಾಕ ನಗರದಲ್ಲಿಯೇ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಶಿಕ್ಷಣ ರಂಗದ ಕಾಳಜಿಯ ಫಲಶೃತಿಯಾಗಿ ಇಂಜನಿಯರಿ0ಗ್ ಕಾಲೇಜು ಪ್ರಾರಂಭವಾಗುತ್ತಿರುವ ಹಿನ್ನಲೆ ಜನರು ಜಾರಕಿಹೊಳಿ ಸಹೋದರರ ಕಾಳಜಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.