ಯುವ ಪೀಳಿಗೆ ಇಂತಹ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ-ಬಿ.ಶ್ರೀನಿವಾಸ!
ಗೋಕಾಕ: ಕ್ರೀಡೆಗಳಲ್ಲಿ ಪಾಲ್ಗೋಳುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಿ.ಶ್ರೀನಿವಾಸ ಹೇಳಿದರು.
ಸೋಮವಾರದಂದು ನಗರದ ಮರ್ಹಷಿ ಶ್ರೀ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ತಾಲೂಕು ಪಂಚಾಯತ್ ಮತ್ತು ಸಾಕ್ಷರತಾ ಶಾಲಾ ಶಿಕ್ಷಣ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗೋಕಾಕ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವ ಪೀಳಿಗೆ ಇಂತಹ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಪ್ರತಿಭಾವಂತರಾಗಿರಿ ಸರಕಾರ ಕ್ರೀಡಾ ಇಲಾಖೆಯಿಂದ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು,ಅದರ ಸದುಪಯೋಗದಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಎಂದು ಹಾರೈಸಿದರು.
ಕ್ರೀಡಾಕೂಟವನ್ನು ಮಮದಾಪೂರ ಮುಖಂಡ ಸುರೇಶ್ ಸನದಿ ಉದ್ಘಾಟಿಸಿದರು. ವೇದಿಕೆಯಲ್ಲಿ ತಹಶೀಲ್ದಾರ್ ಡಾ.ಮೋಹನ್ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಶ್ರೀಮತಿ ಬಿಬಿಬತುಲ ಜಮಾದಾರ, ಸದಸ್ಯರಾದ ಅಬ್ಬಾಸ ದೇಸಾಯಿ, ಜಯಾನಂದ ಹುಣ್ಣಚ್ಯಾಳಿ, ಡಾ.ಅಬ್ದುಲವಹಾಬ ಜಮಾದಾರ, ದೈಹಿಕ ಶಿಕ್ಷಣಾಧಿಕಾರಿ ಎಲ್.ಕೆ.ತೋರಣಗಟ್ಟಿ, ಅನುಷ್ಠಾನ ಅಧಿಕಾರಿ ಬಸವರಾಜ ಹೊಸಮಠ, ಶಾನೂಲ ನಗಾರಿ, ಶಿಕ್ಷಕರಾದ ಎಂ.ಎಲ್.ಪಾಗದ, ಎಲ್.ಬಿ.ಹಿರೇಮಠ, ಕೆ.ಎಸ್.ದಡ್ಡಿ, ಯು.ಬಿ.ಮುತ್ನಾಳ ಇದ್ದರು.