Breaking News

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!!

Spread the love

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!!

ಗೋಕಾಕ: ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದ ಹಿನ್ನಲೆಯಲ್ಲಿ ಬೆಣಚಿನರ‍್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬುಧವಾರದಂದು ಜರುಗಿದೆ.

ಗೋಕಾಕ ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟಿಸುತ್ತಿರುವ ಬೆಣಚಿನರ‍್ಡಿ ಗ್ರಾಮಸ್ತರು.

 

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಬೆಣಚಿನರ‍್ಡಿ ಗ್ರಾಮದ ನವಜಾತ ಶಿಶುವೊಂದನ್ನು ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆಗೆ ದಾಖಲಿಸಿದ್ದು, ಮಂಗಳವಾರದಂದು ವೈದ್ಯರು ಶಿಶು ಆರೋಗ್ಯವಾಗಿದೆ ಎಂದು ಪೋಷಕರಿಗೆ ತಿಳಿಸಿದ್ದರು. ಬುಧವಾರದಂದು ಬೆಳಿಗ್ಗೆ ಶಿಶು ಬಿಳಿರಕ್ತ ಕಣಗಳು ಕಡಿಮೆಯಾಗಿರುವದರಿಂದ ಸಾವನ್ನಪ್ಪಿದೆ ಎಂದು ವೈದ್ಯರು ಸರಿಯಾಗಿ ಮಾಹಿತಿ ನೀಡದ್ದರಿಂದ ಬೆಣಚಿನರ‍್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.
ಘಟನೆ ಹಿನ್ನಲೆ: ಸವಿತಾ ಶಿವಾನಂದ ಬಡಬಡಿ ಅವರು ರ‍್ಭಿಣಿಯಾದಾಗಿನಿಂದ ಮಗು ಜನಿಸುವ ವರೆಗೆ ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ದಿ.30 ರಂದು ಸವಿತಾ ಅವರಿಗೆ ಬೆಳಗಿನ ಜಾವ ಗಂಡು ಮಗು ಜನಿಸಿದ್ದು ಶಿಶುವಿಗೆ ಆರೋಗ್ಯದಲ್ಲಿ ಏರುಪೇರಾದ್ದರಿಂದ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಮಂಗಳವಾರ ದಿ.2 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಂಗಳವಾರದಂದು ರಾತ್ರಿ ಸಮಯದಲ್ಲಿ ಶಿಶುವಿನಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಿರುವದಾಗಿ ತಿಳಿಸಿರುವ ವೈದ್ಯರು ಮುಧೋಳದಿಂದ ಬಿಳಿರಕ್ತಕಣಗಳನ್ನು ತರಸಿಕೊಂಡು ಶಿಶುವಿಗೆ ಹಾಕಲಾಗಿದೆ. ಬುಧವಾರದಂದು ಬೆಳಿಗ್ಗೆ ಶಿಶು ಮೃತ್ತಪಟ್ಟಿದೆ ಎಂದು ವೈದ್ಯರು ತಿಳಿಸುತ್ತಿದ್ದಂತೆ ಪೋಷಕರು, ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಶಿಶು ಆರೋಗ್ಯವಾಗಿದೆ ಎಂದು ಹೇಳಿರುವ ವೈದ್ಯರು ಬಿಳಿರಕ್ತ ಕಣಗಳನ್ನು ಹಾಕಬೇಕಿದೆ. ಎಂದು ಹೇಳಿದ ತಕ್ಷಣ ರಕ್ತಕಣಗಳನ್ನು ತರಲಾಗಿದೆ. ಆದರೆ ಬೆಳಿಗ್ಗೆ ಶಿಶು ಸಾವನ್ನಪ್ಪಿದೆ ಎಂದು ವೈದ್ಯರು ಹೇಳುತ್ತಾರೆ ಇದು ಸುಳ್ಳು ಮಂಗಳವಾರ ರಾತ್ರಿ 9ಗಂಟೆಗೆ ಶಿಶು ಸಾವನ್ನಪ್ಪಿದ್ದು ವೈದ್ಯರು ಸುಳ್ಳು ಹೇಳಿ ಮೃತ ಶಿಶುವಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಪೋಷಕರು, ಗ್ರಾಮಸ್ತರು ಪ್ರತಿಭಟಿಸುತ್ತಿರುವ ಸುದ್ದಿ ತಿಳಿಸ ಪೋಲಿಸರು ಸ್ಥಳಕ್ಕೆ ದೌಢಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ಪೋಲಿಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

 

 

 


Spread the love

About Yuva Bharatha

Check Also

ಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.!

Spread the loveಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.! ಗೋಕಾಕ: ವಿಶ್ವದಲ್ಲಿ ಅತಿ …

Leave a Reply

Your email address will not be published. Required fields are marked *

5 × one =