Breaking News

ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.!

Spread the love

ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.!

 

ಗೋಕಾಕ: ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು. ತಮ್ಮ ಗಳಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸತ್ಕಾರ್ಯಗಳಿಗೆ ದಾನ ಮಾಡಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು.
ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಆ.೨೭ರಂದು ನಡೆದ ೪೧ನೇ ಸತ್ಸಂಗ ಸಮ್ಮೇಳನÀದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿಗೆ ಇದೆ. ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕಾದರೆ ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು. ದಾನ, ಧರ್ಮ ಮಾಡಿದವರಿಗೆ ಪುಣ್ಯ ಬರುತ್ತದೆ ಎಂದರು.


ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮ ಡಾ.ನೀಲಮ್ಮಾತಾಯಿ(ಅಸುಂಡಿ), ಇಂಚಲ ಪೂರ್ಣಾನಂದ ಭಾರತಿ ಸ್ವಾಮಿಜಿ, ಮಲ್ಲಾಪೂರÀ(ಕೆ.ಎನ್) ಚಿದಾನಂದ ಸ್ವಾಮಿಜಿ, ಹುಣಶ್ಯಾಳ(ಪಿ.ಜಿ) ನಿಜಗುಣ ದೇವರು, ತೊಂಡಿಕಟ್ಟಿ ಅಭಿನವ ವೆಂಕಟೇಶ್ವರ ಮಹಾರಾಜರು, ಕುಳ್ಳೂರ ಬಸವಾನಂದ ಭಾರತಿ ಸ್ವಾಮೀಜಿ, ಶೇಗುಣಶಿ ಡಾ.ಮಹಾಂತಪ್ರಭು ಸ್ವಾಮೀಜಿ, ಹಡಗಿನಾಳ ಮಲ್ಲೇಶ ಶರಣರು, ಗದಗ ಶರಣೆ ಮೈತ್ರಾ ತಾಯಿಯವÀರು, ವರಗುಣವಾವುದು? ಎಂಬ ವಿಷಯದ ಮೇಲೆ ಪ್ರವಚನ ಮಾಡಿದರು. ಕರಿಕಟ್ಟಿ ಗುರುನಾಥ ಶಾಸ್ತಿçÃಗಳಿಂದ ಕೀರ್ತನೆ ಜರುಗಿತು.
ಮದರಖಂಡಿ ಸಿದ್ಧಾರೂಢ ಮಠಪತಿ ಅವರ ತಬಲಾ ಸಾಥ್‌ದೊಂದಿಗೆ ಶೇಗುಣ್ಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ ಜರುಗಿತು. ಗಣ್ಯರು, ದಾನಿಗಳಿಗೆ ಶ್ರೀಗಳಿಂದ ಶಾಲು ಹೊದಿಸಿ ಸತ್ಕರಿಸಿಲಾಯಿತು, ಸ್ಥಳೀಯ ಬಸವಂತ ನೀಲಣ್ಣವರ, ಬಸವರಾಜ ಯಾದವಾಡ, ವಿಠ್ಠಲ ಚಂದರಗಿ(ಗಿರಣಿ) ಹಾಗೂ ಕುಟುಂಬದವರಿAದ ಇಂಚಲ ಡಾ.ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕೀರಿಟ ಪೂಜೆ, ಶ್ರೀಗಳಿಂದ ಆಶೀರ್ವಚನ, ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ ಮತ್ತು ಸಹೋದರರಿಂದ ಮಹಾಪ್ರಸಾದ ಸೇವೆ ನಡೆಯಿತು.
ಗ್ರಾಮದ ಈಶ್ವರ ದೇವರ ದೇವಸ್ಥಾನದ ಈಶ್ವರ ದೇವರ ಗದ್ದುಗೆ ೫ದಿನಗಳ ಕಾಲ ಮುಂಜಾನೆ ೬ ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ, ಆ.೨೭ರಂದು ಪ್ರಾತ:ಕಾಲ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸದ್ಭಕ್ತರಿಂದ, ಶಿವ ಭಜನೆ, ಜಾಗರಣೆ ಆ.೨೪ರಿಂದ ಐದು ದಿನಳ ಕಾಲ ಪ್ರತಿ ದಿನ ಸಂಜೆ ೭:೩೦ಕ್ಕೆ ನಾಡಿನ ಹೆಸರಾಂತ ಹಲವಾರು ಜನ ಮಹಾತ್ಮರು, ಶರಣರು, ಹರ, ಗುರು ಚರಮೂರ್ತಿಗಳಿಂದ ವಿವಿಧ ವಿಷಯಗಳ ಮೇಲೆ ಪ್ರವಚನ ನಡೆಯಿತು. ಸ್ಥಳೀಯ ಈಶ್ವರ ಭಜನಾ ಮಂಡಳಿ ವತಿಯಿಂದ ಸಕಲ ಶ್ರೀಗಳಿಗೆ ಸತ್ಕಾರ ಜರುಗಿತು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಂತ-ಶರಣರು, ಹರ, ಗುರು, ಚರಮೂರ್ತಿಗಳು, ಗಣ್ಯರು, ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಮತ್ತೀತರರು ಇದ್ದರು. ಬಸವರಾಜ ಪಣದಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.


Spread the love

About Yuva Bharatha

Check Also

ಜೂನ್ ೩೦ರಿಂದ ಜುಲೈ ೮ರವರೆಗೆ ಗ್ರಾಮ ದೇವತೆಯರ ಜಾತ್ರೆ, ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಘೋಷಣೆ.!

Spread the love             ಜೂನ್ ೩೦ರಿಂದ ಜುಲೈ ೮ರವರೆಗೆ ಗ್ರಾಮ ದೇವತೆಯರ …

Leave a Reply

Your email address will not be published. Required fields are marked *

15 − 8 =