Breaking News

ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾದರೆ ಮಾತ್ರ ಗುರುವಿಗೆ ಸಂತಸ-ಜಿ.ಎನ್.ಸಾoಗಲಿ

Spread the love

ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾದರೆ ಮಾತ್ರ ಗುರುವಿಗೆ ಸಂತಸ-ಜಿ.ಎನ್.ಸಾoಗಲಿ

ಗೋಕಾಕ: ಜ್ಞಾನ ಗುರು ನೀಡಿದರೆ, ಸಂಸ್ಕಾರ ಹೆತ್ತವರು ನೀಡುತ್ತಾರೆ. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೇಯ ಪ್ರಜೆಯಾದರೆ ಮಾತ್ರ ಗುರುವಿನ ಋಣ ತೀರಿದಂತೆ ಅದರಂತೆ ಸಮಾಜದಲ್ಲಿ ಸಾಧನೆ ಮಾಡಿ ಒಳ್ಳೇಯ ಹೆಸರು ಪಡೆದರೆ ಹೆತ್ತವರಿಗೆ ಸಂತೋಷವಾಗುತ್ತದೆ ಎಂದು ದಿ.ವೋಲ್ಕಾರ್ಟ ಆಕ್ಯಾಡೆಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎನ್.ಸಾಂಗಲಿ ಹೇಳಿದರು.

ಗೋಕಾಕ ಸಮೀಪದ ಗೋಕಾಕ ಫಾಲ್ಸ್ ದಿ.ವೋಲ್ಕಾರ್ಟ ಆಕ್ಯಾಡೆಮಿ ಶಾಲೆಯಲ್ಲಿ ಜರುಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಅವರು ಸಮೀಪದ ಗೋಕಾಕ್ ಫಾಲ್ಸ್ನಲ್ಲಿ ದಿ.ವೋಲ್ಕಾರ್ಟ ಆಕ್ಯಾಡೆಮಿಯ ಸನ್ ೨೦೦೨-೦೩ ನೇ ಸಾಲಿನ ಪ್ರಾಥಮಿಕ ಶಾಲೆ ಮತ್ತು ೨೦೦೫-೦೬ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗುರುವಿಗೆ ಅತೀ ಅಮೂಲ್ಯವಾದ ಸ್ಥಾನವಿದ್ದು ಗುರುವಿನ ಮೂಲಕ ಶಿಕ್ಷಣ ಮತ್ತು ಜ್ಞಾನ ಪಡೆದು ಉತ್ತಮ ಸಾಧನೆಗೈದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಾಗ ಮಾತ್ರ ವಿದ್ಯೆ ಕಲಿಸಿದ ಗುರುವಿಗೆ ನೀಡುವ ಗೌರವ ಎಂದರು ಅಲ್ಲದೇ ಬ್ರಿಟಿಷರ ಆಡಳಿತದಲ್ಲಿ ಪ್ರಾರಂಭವಾದ ಈ ಶಾಲೆಗೆ ಹಲವು ವರ್ಷಗಳ ಇತಿಹಾಸವನ್ನು ಹೊಂದಿದೆ. ಶಾಲೆಯಲ್ಲಿ ಸುಮಾರು ೨೫ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಬೇರೆ ಬೇರೆ ದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಪಾಲ್ಗೊಂಡಿದ್ದರು. ಸರಸ್ವತಿ ಭಾವಚಿತ್ರ ಪೂಜೆ ಸಲ್ಲಿಸಿ ಹಾಗೂ ಅಗಲಿದ ಶಿಕ್ಷಕರಿಗೆ ಮತ್ತು ಸಹಪಾಠಿಗಳಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರೊಂದಿಗೆ ಒಡನಾಟದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಎ.ಎಂ.ನಾಯಕ್, ಎಂ.ಎA.ಅAಗಡಿ, ಬಿ.ಎ.ಬರಗಾಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲ ಶಿಕ್ಷಕರಿಗೂ ಗೌರವ ಸನ್ಮಾನ ಮಾಡಲಾಯಿತು.ಕಾರ್ಯಕ್ರಮವನ್ನು ರಾಣಿ ಹೂಗಾರ ಸ್ವಾಗತಿಸಿದರು. ಅರುಣ್ ಮಾನೆಪ್ಪಗೋಳ ನಿರೂಪಿಸಿ, ವಂದಿಸಿದರು.


Spread the love

About Yuva Bharatha

Check Also

ನಮ್ಮ ಸಂಸ್ಥೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜತೆಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ-ಸನತ್ ಜಾರಕಿಹೊಳಿ

Spread the loveನಮ್ಮ ಸಂಸ್ಥೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜತೆಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ-ಸನತ್ ಜಾರಕಿಹೊಳಿ ಗೋಕಾಕ: …

Leave a Reply

Your email address will not be published. Required fields are marked *

eighteen − 5 =