Breaking News

ಫೆ.7 ಶನಿವಾರದಂದು ವಿಶಾಲ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ-ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ

Spread the love

ಫೆ.7 ಶನಿವಾರದಂದು ವಿಶಾಲ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ-ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ

ಗೋಕಾಕ: ನಗರದಲ್ಲಿ ದಿ.7ರ ಶನಿವಾರದಂದು ವಿಶಾಲ ಹಿಂದೂ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮಾವೇಶ ಸಂಚಾಲನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ ಹೇಳಿದರು.

ಗೋಕಾಕ: ಹಿಂದೂ ಸಮಾವೇಶ ಸಂಚಾಲನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ ಮಾತನಾಡುತ್ತಿರುವದು.

ಅವರು, ನಗರದಲ್ಲಿ ಕರೇದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ಶನಿವಾರ ದಿ.೭ರಂದು ಮಧ್ಯಾಹ್ನ ೨.೩೦ಕ್ಕೆ ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಅಪ್ಸರಾ ಕೂಟ, ಶೆಟ್ಟಿಕೂಟ, ಭಾಫನಾ ಚೌಕ ಮಾರ್ಗವಾಗಿ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದ ವರೆಗೆ ಬೃಹತ್ ಶೋಭಾಯಾತ್ರೆ ಜರುಗಲಿದೆ. ನಂತರ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ವಿಶಾಲ ಹಿಂದೂ ಸಮಾವೇಶ ನಡೆಯಲಿದ್ದು ಈಸಮಾವೇಶದಲ್ಲಿ ೫ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿರುವದಾಗಿ ತಿಳಿಸಿದರು.
ದಿವ್ಯಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಾರದಾ ಶಕ್ತಿಪೀಠದ ಮಾತಾ ಶಿವಮಯಿ ಅಮ್ಮನವರು ವಹಿಸಲಿದ್ದು, ಮುಖ್ಯವಕ್ತಾರರಾಗಿ ಪ್ರಖರ ವಾಗ್ಮಿ, ಯುವ ಬ್ರಿಗೇಡ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಸಹವಕ್ತಾರರಾಗಿ ಆರ್‌ಎಸ್‌ಎಸ್ನ ಬೆಳಗಾವಿ ಪ್ರಾಂತ ಕಾರ್ಯವಾಹಕ ರಾಘವೇಂದ್ರ ಕಾಗವಾಡ, ರಾಷ್ಟಿçÃಯ ಸ್ವಯಂ ಸೇವಿಕಾ ಸಮಿತಿಯ ಜಿಲ್ಲಾ ಕಾರ್ಯವಾಹಿಕಾ ಶ್ರೀಮತಿ ಅನುಪಾ ಕೌಶಿಕ ಆಗಮಿಸಲಿದ್ದು ಗೋಕಾಕ ನಗರದ ಹಾಗೂ ಸುತ್ತಲಿನ ಹಿಂದೂ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಮಾವೇಶ ಸಂಚಾಲನಾ ಸಮಿತಿ ಉಪಾಧ್ಯಕ್ಷರಾದ ಜಯಾನಂದ ಮುನವಳ್ಳಿ, ಸಂಗೀತಾ ಬನ್ನೂ, ಕಾರ್ಯದರ್ಶಿ ಗಿರೀಶ ರಾಠೋಡ, ನವೀನ ಜರತಾರಕರ, ಕೃಷ್ಣಾ ಕುರಬಗಟ್ಟಿ, ಜ್ಞಾನಾ ಪಾಟೀಲ, ವಿಕಾಸ ನಾಯಿಕ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಸುವಿಚಾರ ಚಿಂತನ ಕಾರ್ಯಕ್ರಮ

Spread the loveಸುವಿಚಾರ ಚಿಂತನ ಕಾರ್ಯಕ್ರಮ ಗೋಕಾಕ: ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ದಿ.೧೮ರಂದು ಮಧ್ಯಾಹ್ನ …

Leave a Reply

Your email address will not be published. Required fields are marked *

seven − 5 =