Breaking News

ಕುಂಬಾರ ಸಮುದಾಯದ ಬೇಡಿಕೆಗೆ ನನ್ನ ಬೆಂಬಲವಿದ್ದು ತಮ್ಮ ಹೋರಾಟಕ್ಕೆ ಎಲ್ಲ ರೀತಿಯಲ್ಲಿ ಸಹಾಯ ಸಹಕಾರ ನೀಡುವೆ- ಕೆಎಮ್‌ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ.!

Spread the love

ಕುಂಬಾರ ಸಮುದಾಯದ ಬೇಡಿಕೆಗೆ ನನ್ನ ಬೆಂಬಲವಿದ್ದು ತಮ್ಮ ಹೋರಾಟಕ್ಕೆ ಎಲ್ಲ ರೀತಿಯಲ್ಲಿ ಸಹಾಯ ಸಹಕಾರ ನೀಡುವೆ- ಕೆಎಮ್‌ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ.!


ಗೋಕಾಕ: ಕುಂಬಾರ ಸಮುದಾಯಕ್ಕೆ ಪ್ರತ್ಯೇಕ ಕುಂಬಾರರ ಅಭಿವೃದ್ಧಿ ನಿಗಮಕ್ಕಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಸ್ವಾಭಿಮಾನದ ನಡಿಗೆಯ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿ ಕೆಎಮ್‌ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕರ್ನಾಟಕ ಕುಂಬಾರ ಯುವ ಸೈನ್ಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಕುಂಬಾರ ಸಮುದಾಯವು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುತ್ತದೆ. ರಾಜ್ಯದಲ್ಲಿ ೨೦-೨೫ ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಹೀಗಾಗಿ ಕುಂಬಾರ ಸಮುದಾಯಕ್ಕೆ ಪ್ರತ್ಯೇಕ ಕುಂಬಾರರ ಅಭಿವೃದ್ಧಿ ನಿಗಮಕ್ಕಾಗಿ ಒತ್ತಾಯಿಸಿ ಸ್ವಾಭಿಮಾನದ ನಡಿಗೆ ದಿ.೩೦ರಂದು ಬೆಳಿಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಶ್ರೀ ಕುಂಬಾರ ಗುಂಡಯ್ಯ ಸ್ವಾಮಿಜಿಯವರ ಮತ್ತು ಶಂಕರ ಶೆಟ್ಟಿ ಕುಂಬಾರ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ತಾವು ಕುಂಬಾರರ ಬೇಡಿಕೆ ಈಡೇರಿಕೆಗಾಗಿ ನಮ್ಮ ಧ್ವನಿಯಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೆಎಮ್‌ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಸ್ವೀಕರಿಸಿ ಮಾತನಾಡಿ ಕುಂಬಾರ ಸಮುದಾಯದ ಬೇಡಿಕೆಗೆ ನನ್ನ ಬೆಂಬಲವಿದ್ದು ತಮ್ಮ ಹೋರಾಟಕ್ಕೆ ಎಲ್ಲ ರೀತಿಯಲ್ಲಿ ಸಹಾಯ ಸಹಕಾರ ನೀಡುವದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕುಂಬಾರ ಯುವ ಸೈನ್ಯ ಕಾರ್ಯಕರ್ತರು ಕೆಎಮ್‌ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ಕರ್ನಾಟಕ ಕುಂಬಾರ ಯುವ ಸೈನ್ಯ ತಾಲೂಕಾಧ್ಯಕ್ಷ ಮಹಾಂತೇಶ ಕುಂಬಾರ, ಉಪಾಧ್ಯಕ್ಷ ಶ್ರೀಶೈಲ ಕುಂಬಾರ, ದುಂಡಪ್ಪ ಕುಂಬಾರ, ಕಾಡಪ್ಪ ಕುಂಬಾರ, ಸತೀಶ ಕುಂಬಾರ, ವಿಠ್ಠಲ ಕುಂಬಾರ, ಮಹಾದೇವ ಕುಂಬಾರ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು-ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು!

Spread the loveಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು-ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು! ಗೋಕಾಕ: ಬ್ಯಾನರ್‌ಗಳ …

Leave a Reply

Your email address will not be published. Required fields are marked *

4 × 5 =