ಗೋಕಾಕ: ರಾಜ್ಯ ಸರಕಾರ ಕಳೆದ ಒಂದು ವರ್ಷದಿಂದ ಪ್ರವಾಹ, ಕರೋನಾದಂತಹ ಸಾವಲುಗಳನ್ನು ಎದುರಿಸಿ, ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಸಾಧನೆಗೈ ಸರಕಾರದ ಸಾಧನೆಗಳನ್ನು ಮನೆಮನಗಳಲ್ಲಿ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಯುವ ಧುರೀಣ ಹನಮಂತ ದುರ್ಗನ್ನವರ ಹೇಳಿದರು.
ಅವರು, ಶನಿವಾರದಂದು ತಾಲೂಕಿನ ಮಾಲದಿನ್ನಿ, ಉಪ್ಪಾರಹಟ್ಟಿ ಗ್ರಾಮಗಳಲ್ಲಿ ಸರಕಾರದ ಸಾಧನೆಗಳ ಕರಪತ್ರ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಳೆದ ಒಂದು ವರ್ಷಗಳಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಮ್ ಬಿ ಎಸ್ ಯಡಿಯೂರಪ್ಪ ಶ್ರಮಿಸುತ್ತಿದ್ದು, ಸರಕಾರ ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರ ಮನಗಳಿಗೆ ಮುಟ್ಟಿಸುವಲ್ಲಿ ಕಾರ್ಯಕರ್ತರು ಕಂಕಣಬದ್ಧರಾಗುವAತೆ ತಿಳಿಸಿದರು.
ಈ ಸಂದರ್ಭದಲ್ಲಿ ಹನಮಂತ ಖಿಚಡಿ, ಸಿದ್ದಪ್ಪ ಬೂದಿಗೊಪ್ಪ, ಮಹಾದೇವ ಭಂಡಿ, ಮುತ್ತೆಪ್ಪ ಕಡಕೋಳ, ರಮೇಶ ತಿಗಡಿ, ಸಂತೋಷ ಚಿಗದನ್ನವರ, ಬಸು ನೇಸರಗಿ, ಮಹಾದೇವ ಚುನನ್ನವರ, ಸಿದ್ದಪ್ಪ ಕೊಳವಿ, ಭೀಮಶಿ ಕೊಳವಿ, ಮಾರುತಿ ಸೊಪ್ಪಡ್ಲ, ಭೀಮಶಿ ಚಿಗದನ್ನವರ, ಕರೇಪ್ಪ ಬೂದಿಗೊಪ್ಪ, ಮಾರುತಿ ಭಂಡಿ, ವಿಠ್ಠಲ ಚಿನ್ನಾಕಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.
