ನಾಳೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಘಟ್ಟಿಬಸವಣ್ಣ ಆಣೆಕಟ್ಟು ನಿರ್ಮಾಣ ಕಾಮಗಾರಿಯ ಅಡಿಗಲ್ಲು.!
ಗೋಕಾಕ: ನಗರದ ಸಮೀಪದ ಯೋಗಿಕೊಳ್ಳ ರಸ್ತೆಯ ಹತ್ತಿರದಲ್ಲಿರುವ ಮಾರ್ಕಂಡೇಯ ನದಿಗೆ ಅಡ್ಡಲಾಗಿ ೯೬೯ಕೋಟಿ ರೂಗಳ ವೆಚ್ಚದಲ್ಲಿ ಘÀಟ್ಟಿಬಸವಣ್ಣ ಆಣೆಕಟ್ಟು ನಿರ್ಮಾಣ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮ ಇದೆ ದಿ.೧ರ ಬುಧವಾರದಂದು ಬೆಳಿಗ್ಗೆ ೯ಗಂಟೆಗೆ ಶಾಸಕ ರಮೇಶ ಜಾರಕಿಹೊಳಿ ಅವರ ಅಮೃತ ಹಸ್ತದಿಂದ ನೆರವೇರಲಿದೆ.
ಘಟ್ಟಿಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಯು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಆಣೆಕಟ್ಟು ನಿರ್ಮಿಸಿ ೬.೦೦ ಟಿಎಮ್‌ಸಿ ನೀರನ್ನು ಶೇಖರಣೆ ಮಾಡಿ, ಗೋಕಾಕ ಮತ್ತು ಸುತ್ತಲಿನ ೧೩೧ ಗ್ರಾಮಗಳಿಗೆ ಹಾಗೂ ಹುಕ್ಕೇರಿ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನ ಭಾಗಶಃ ಗ್ರಾಮಗಳಿಗೆ ಕುಡಿಯುವ ನೀರುನ ಸೌಲಭ್ಯ ಕಲ್ಪಿಸುವದಲ್ಲದೇ ಗೋಕಾಕ ತಾಲೂಕಿನ ಸುತ್ತಮುತ್ತಲಿನ ಆಯ್ದ ಕೆರೆಗಳನ್ನು ತುಂಬಿಸಲು, ಕಾರ್ಖಾನೆಗಳಿಗೆ ನೀರನ್ನು ಒದಗಿಸಲು ಮತ್ತು ಗೋಕಾಕ ಪಟ್ಟಣವನ್ನು ಮಾರ್ಕಂಡೇಯ ನದಿಯ ಪ್ರವಾಹದಿಂದ ರಕ್ಷಿಸುವ ಯೋಜನೆಯಾಗಿದೆ.
೪೨೭.೫೦ ಮೀ ಉದ್ದ, ೮೬.೫೦ ಮೀ ಎತ್ತರದಲ್ಲಿ ನಿರ್ಮಾಣವಾಗಲಿರುವ ಘಟ್ಟಿಬಸವಣ್ಣ ಜಲಾಶಯ ೬ಗೇಟಗಳನ್ನು ಹೊಂದಲಿದೆ. ಬಿಜೆಪಿ ಪದಾಧಿಕಾರಿಗಳು, ಗೋಕಾಕ ಮತಕ್ಷೇತ್ರದ ಹಿರಿಯರು ಹಾಗೂ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.