ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಬೆಂಬಲ ಘೋಷಿಸಿದ ದಲಿತ ಮುಖಂಡರು.
ಗೋಕಾಕ: ದಲಿತ ಸಮುದಾಯವನ್ನು ಕಾಂಗ್ರೇಸ್ ಪಕ್ಷ ಚುನಾವಣೆ ಗೆಲುವಿಗಾಗಿ ಮಾತ್ರ ಉಪಯೋಗಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿಲ್ಲವೆಂದು ದಲಿತ ಮುಖಂಡ ಅಜೀತ ಹರಿಜನ ಹೇಳಿದರು.
ಅವರು, ಶನಿವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾಕ ಮತಕ್ಷೇತ್ರದ ಪರಿಶಿಷ್ಠ ಜಾತಿಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ, ಕಾಂಗ್ರೇಸ್ ಪಕ್ಷ ೭೫ವರ್ಷಗಳ ಕಾಲ ಸುಧೀರ್ಘವಾಗಿ ಆಡಳಿತ ನಡೆಸಿದರು ದಲಿತ ಸಮುದಾಯದ ಅಭಿವೃದ್ಧಿಯಾಗಿಲ್ಲ. ಈ ಬಾರಿ ಗೋಕಾಕ ಮತಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನಾವೆಲ್ಲ ಬೆಂಬಲಿಸೋಣ ಎಂದರು.
ಹಲವು ದಶಕಗಳಿಂದ ರಮೇಶ ಜಾರಕಿಹೊಳಿ ಅವರು ನಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಲೆ ಬಂದಿದ್ದಾರೆ. ಶೀಘ್ರದಲ್ಲಿಯೇ ನಗರದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ನಾವೆಲ್ಲ ಅವರಿಗೆ ಬೆಂಬಲ ವ್ಯಕ್ತಪಡಿಸೋಣ. ನಾವೆಲ್ಲ ಸಂಘಟಿತರಾಗಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಇದಕ್ಕೆ ಮುಖಂಡರೆಲ್ಲ ಇಂದಿನಿAದಲೆ ಸಂಘಟನೆಗೆ ಮುಂದಾಗುವAತೆ ಕರೆ ನೀಡಿದರು.
ಇನ್ನೊರ್ವ ಮುಖಂಡ ಸುಧೀರ ಜೋಡಟ್ಟಿ ಮಾತನಾಡಿ, ಬಿಜೆಪಿ ಪಕ್ಷದ ಮೇಲೆ ಸುಳ್ಳು ಆಪಾದನೆ ಮಾಡುತ್ತಿರುವ ಕಾಂಗ್ರೇಸ್‌ನವರು ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಏನು ಮಾಡಿದೆ ಎಂಬುದನ್ನು ಸಮಾಜದ ಬಾಂಧವರು ನೆನಪಿಸಿಕೊಳ್ಳಿ. ನರೇಂದ್ರ ಮೋದಿಯವರು ನಮ್ಮ ಸಮೂದಾಯದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಮೀಸಲಾತಿಯನ್ನು ಹೆಚ್ಚಿಸಿದ್ದಾರೆ. ನಾವೆಲ್ಲ ಬಿಜೆಪಿ ಪಕ್ಷವನ್ನು ಬೆಂಬಲಿಸೋಣ ರಮೇಶ ಜಾರಕಿಹೊಳಿ ಕೈ ಬಲಪಡಿಸೋಣ ಎಂದರು.
ಮುಖಂಡರುಗಳಾದ ಬಾಳೇಶ ಸಂತವ್ವಗೋಳ, ಕಾಡಪ್ಪ ಮೇಸ್ತಿç, ಹಣಮಂತ ಕಾಲಗಿ, ಅಶೋಕ ಬಂಗಾರಿ, ಆರ್ ಬಿ ಭಜಂತ್ರಿ, ರಾಮಕೃಷ್ಣ ಮನ್ನಿಕೇರಿ, ಡಿ ಪಿ ಗುಡಾಜ ಮಾತನಾಡಿದರು.
ವೇದಿಕೆಯ ಮೇಲೆ ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಮಾಜಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ವೀರಭದ್ರ ಮೈಲನ್ನವರ, ಅಶೋಕ ಮೇಸ್ತಿç, ಹಣಮಂತ ಗಾಡಿವಡ್ಡರ, ನೀಲಮ್ಮ ಹಂದಿಗುAದ, ಮಹಾದೇವ ಭಜಂತ್ರಿ, ಮಲ್ಲಪ್ಪ ಕಾಂಬಳೆ ಸೇರಿದಂತೆ ಇತರರು ಇದ್ದರು.