ವಿದ್ಯಾರ್ಥಿಗಳಿಗೆ ಲ್ಯಾಪ್-ಟಾಪ್ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.

ಗೋಕಾಕ: ಕೊಣ್ಣೂರು ಪುರಸಭೆ ವಿವಿಧ ಯೋಜನೆಗಳ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಎಮ್‌ಬಿಬಿಎಸ್ ಮತ್ತು ಬಿಇ ವ್ಯಾಸಾಂಗ ಮಾಡುತ್ತಿರುವ ೮ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪಗಳನ್ನು ಶಾಸಕ ರಮೇಶ ಜಾರಕಿಹೊಳಿ ವಿತರಿಸಿದರು.
ಈ ಸಂದರ್ಭದಲ್ಲಿ ಕೊಣ್ಣೂರು ಪುರಸಭೆ ಅಧ್ಯಕ್ಷೆ ಶ್ರೀಮತಿ ಮಂಗಲ ತೇಲಿ, ಸದಸ್ಯರುಗಳಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ರಾಮಸಿದ್ಧ ಮಗದುಮ, ಗೂಳಪ್ಪ ಅಸೋದೆ, ಕಾಡಪ್ಪ ನಾಯಿಕ, ನಜೀರ ನದಾಫ, ಧನ್ಯಕುಮಾರ ಮೇಗೆರಿ, ಕುಮಾರ ಕೊಣ್ಣೂರ, ಇಮ್ರಾನ ಜಮಾದಾರ ಸೇರಿದಂತೆ ಇತರರು ಇದ್ದರು.
YuvaBharataha Latest Kannada News