ಗೋಕಾಕ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಉಪ್ಪಾರಟ್ಟಿ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ ಹೇಳಿದರು.
ಅವರು, ಮಂಗಳವಾರದAದು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಮಂಗಳವಾರದAದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ನೀರಾವರಿ ಇಲಾಖೆಯಿಂದ ಎಸ್‌ಇಪಿಟಿಎಸ್‌ಪಿ ಯೋಜನೆಯಡಿಯಲ್ಲಿ ೪೦ಲಕ್ಷ ರೂಪಾಯಿಗಳ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ಲೋಕೋಪಯೋಗಿ ಇಲಾಖೆಯಿಂದ ಎಸ್‌ಇಪಿಟಿಎಸ್‌ಪಿ ಯೋಜನೆಯಡಿಯಲ್ಲಿ ೧೦ಲಕ್ಷ ರೂಪಾಯಿಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹನಮಂತ ದುರ್ಗನ್ನವರ, ಮಹಾದೇವ ಚುನನ್ನವರ, ಸಿದ್ದಪ್ಪ ಆಡಿನ, ರಾಮಸಿದ್ಧ ಮಜ್ಜಗಿ, ರಂಗಪ್ಪ ನಂದಿ, ಕರೇಪ್ಪ ಕೊಳವಿ, ಸಿದ್ದಪ್ಪ ಬೂದಿಗೊಪ್ಪ, ಯಮನಪ್ಪ ಬನಾಜ, ತಿಪ್ಪಣ್ಣ ಕಡಕೋಳ, ಬಾಳಯ್ಯ ಅಜ್ಜನವರ, ಲಕ್ಕಪ್ಪ ಮೆಳವಂಕಿ, ದಶರಥ ಖಿಚಡಿ, ಹನಮಂತ ಖಿಚಡಿ, ತಾಪಂ ಸದಸ್ಯ ಯಲ್ಲಪ್ಪ ಬೂದಿಗೊಪ್ಪ, ಮುಖಂಡರುಗಳಾದ ಲಕ್ಷö್ಮಣ ಆಡಿನ, ಸಿದ್ದಪ್ಪ ಖಿಚಡಿ, ನಾರಾಯಣ ಮೂಡಲಗಿ, ಗುರುನಾಥ ಭಾಗೋಜಿ, ರಾಮಪ್ಪ ಕಡಕೋಳ, ಮಹಾದೇವ ಭಂಡಿ, ಹನಮಂತ ಕಡಕೋಳ, ರಾಮಪ್ಪ ಭಾಗೋಜಿ, ಸಿದ್ದಪ್ಪ ಕೊಳವಿ, ಸಂತೋಷ ಚಿಗದನ್ನವರ, ಸಂತೋಷ ಕಂಕಣವಾಡಿ, ಕಲ್ಲಪ್ಪ ಖಿಚಡಿ, ಅಡಿವೆಪ್ಪ ಚಿಗದನ್ನವರ, ಸೇರಿದಂತೆ ಗ್ರಾಮಸ್ಥರು ಇದ್ದರು.
Check Also
ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!
Spread the loveಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.! ಗೋಕಾಕ: ಹುಬ್ಬಳ್ಳಿಯಲ್ಲಿ …