ಶುಕ್ರವಾರದಂದು ಗೋಕಾಕನಲ್ಲಿ ಬೆಳಗಾವಿ ಜಿಲ್ಲಾ ಯುವಮೋರ್ಚಾ ಸಮಾವೇಶ.!
ಗೋಕಾಕ: ಬೆಳಗಾವಿ ಗ್ರಾಮಾಂತರ ಜಿಲ್ಲೆ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಟ್ಟದ ಯುವ ಮೋರ್ಚಾ ಸಮಾವೇಶ ಶುಕ್ರವಾರದಂದು ನಡೆಯಲಿದೆ ಎಂದು ಬಿಜೆಪಿ ಗೋಕಾಕ ನಗರ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ ತಿಳಿಸಿದ್ದಾರೆ.
ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಇದೆ ದಿ.೨೪ ಶುಕ್ರವಾರದಂದು ಮುಂಜಾನೆ ೧೦ ಗಂಟೆಗೆ ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದರು.
ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ ಅವರ ನೇತ್ರತ್ವ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ನಾಯಕ ಅಮರನಾಥ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜರುಗಲಿದೆ. ಬೆಳಗಾವಿ ಗ್ರಾಮಾಂತರ ಜಿಲ್ಲೆ ೮ ವಿಧಾನ ಸಭಾ ಕ್ಷೇತ್ರಗಳ ಯುವ ಮೋರ್ಚಾ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಇದಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿ ಬಸೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಯುವತಿಯರ ಬೈಕ್ ರ್ಯಾಲಿ ಮುಖಾಂತರ ಸಮಾವೇಶದ ವೇದಿಕೆಯ ವರೆಗೆ ರ್ಯಾಲಿ ನಡೆಯಲಿದೆ.
ಸಮಾವೇಶದಲ್ಲಿ ಬಿಜೆಪಿ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ, ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ, ಕೆಎಮ್ಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ನೇಸರಗಿ, ಗೋಕಾಕ ಹಾಗೂ ಅರಭಾವಿ ಮಂಡಲಗಳ ಅಧ್ಯಕ್ಷರು ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ಆಗಮಿಸಲಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಯುವತಿಯರು ಆಗಮಿಸಬೇಕು ಎಂದು ವಿನಂತಿಸಿದ್ದಾರೆ.