Breaking News

ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಬಿಜೆಪಿ ಪಕ್ಷವನ್ನೇ ಬೆಂಬಲಿಸಿ.-ಭಾಜಪ ಅಭ್ಯರ್ಥಿ ರಮೇಶ ಜಾರಕಿಹೊಳಿ.

Spread the love

ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಬಿಜೆಪಿ ಪಕ್ಷವನ್ನೇ ಬೆಂಬಲಿಸಿ.-ಭಾಜಪ ಅಭ್ಯರ್ಥಿ ರಮೇಶ ಜಾರಕಿಹೊಳಿ.


ಗೋಕಾಕ: ಕ್ಷೇತ್ರದ ಜನತೆಯ ಆಶೀರ್ವಾಧವೇ ನನ್ನ ಶಕ್ತಿಯಾಗಿದ್ದು ಈ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ ತಮ್ಮ ಸೇವೆಗೆ ಅವಕಾಶ ಕಲ್ಪಿಸುವಂತೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿದರು.
ಗುರುವಾರದಂದು ಗೋಕಾಕ ಮತಕ್ಷೇತ್ರದ ಮಮದಾಪೂರ ಹಾಗೂ ಮಕ್ಕಳಗೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತ ಮಾತನಾಡಿ, ಕಳೇದ ಆರು ಬಾರಿ ಆಶೀರ್ವಧಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದಿರಿ. ಈ ಬಾರಿಯೂ ಆಶೀರ್ವಧಿಸಿ ಇನ್ನು ಹೆಚ್ಚಿನ ಸಹಕಾರವನ್ನು ನೀಡುವಂತೆ ಕೋರಿದರು.
ದೇಶದ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಪಕ್ಷದತ್ತ ಇಂದಿನ ಯುವ ಪೀಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ಮತಗಳಿಗಾಗಿ ಸಮಾಜಗಳ ನಡುವೆ ಜಗಳ ಹಚ್ಚುವ ಮೂಲಕ ನಿಜವಾದ ಕೋಮುವಾದಿ ಪಕ್ಷವಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೇಸ್ ನಾಯಕರು ಅದನ್ನು ಸಾಕ್ಷೀ ಸಮೇತ ತೋರಿಸಲಿ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಕೇವಲ ಮತಕ್ಕಾಗಿ ಸುಳ್ಳು ಆಪಾಧನೆ ಮಾಡುತ್ತಿದ್ದಾರೆ. ಇದಕ್ಕೆ ಜನತೆ ಕಿವಿಗೊಡದೇ ಎಲ್ಲ ಸಮಾಜಗಳನ್ನು ಸಂಘಟಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವದು ನಿಶ್ಚಿತ. ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಬಿಜೆಪಿ ಪಕ್ಷವನ್ನೇ ಬೆಂಬಲಿಸಿ.
ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ನನಗೆ ತಮ್ಮ ಮತಗಳನ್ನು ನೀಡುವ ಮೂಲಕ ಸಹಕಾರ ನೀಡಿ. ನಿಮ್ಮ ಸಹಕಾರದಿಂದಲೇ ರಾಜ್ಯ ಮಟ್ಟದಲ್ಲಿ ನನಗೆ ಹೆಚ್ಚಿನ ಶಕ್ತಿ ಬಂದಿದ್ದು. ಇನ್ನು ಹೆಚ್ಚಿನ ತಮ್ಮ ಸೇವೆಯನ್ನು ಮಾಡಲು ನಿಮ್ಮ ಸಹಕಾರ ಅತಿ ಅವಶ್ಯವಿದ್ದು ಅದನ್ನು ಈ ಚುನಾವಣೆಯಲ್ಲಿ ತಮ್ಮ ಮತಗಳನ್ನು ನೀಡುವ ಮೂಲಕ ಆಶೀರ್ವಧಿಸುವಂತೆ ಕೋರಿದರು.
ಮಾಲದಿನ್ನಿ, ಉಪ್ಪಾರಹಟ್ಟಿ, ಮಮದಾಪೂರ, ಮರಡಿಶಿವಾಪೂರ, ಅಜ್ಜನಕಟ್ಟಿ, ದುಂಡಾನಟ್ಟಿ, ಪಂಚನಾಯ್ಕನಹಟ್ಟಿ, ಚಿಕ್ಕನಂದಿ, ಹಿರೇನಂದಿ, ಮಕ್ಕಳಗೇರಿ, ಹಿರೇಹಟ್ಟಿ, ಜಮನಾಳ, ಶಿಲ್ತಿಭಾವಿ, ಪುಡಕಲಕಟ್ಟಿ, ಗಿಳಿ ಹೊಸೂರ, ಖನಗಾಂವ, ನಭಾಪೂರ, ದೇವಗೌಡನಹಟ್ಟಿ, ಗುದನಟ್ಟಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಎಲ್ಲಾ ಗ್ರಾಮಗಳಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಜಯ ಘೋಷ ಹಾಕುವ ಮೂಲಕ ಸ್ವಾಗತಿಸಿದರು. ನಾವು ಯಾವಕಾರಣಕ್ಕೂ ನಿವ್ಮ್ಮಂಥ ಶಾಸಕರನ್ನು ಕಳೆದುಕೊಳ್ಳುವದಿಲ್ಲ ನೀವು ಬೇರೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ನಾವು ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ ಎಂದು ಜನರು ವಾಗ್ದಾನ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಗ್ರಾಪಂ ಅಧ್ಯಕ್ಷರು-ಸದಸ್ಯರು, ಪಿಕೆಪಿಎಸ್ ಅಧ್ಯಕ್ಷರು-ಸದಸ್ಯರು, ಜನಪ್ರತಿನಿಧಿಗಳು, ಗ್ರಾಮಗಳ ಹಿರಿಯರು, ಮುಖಂಡರು ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

four × 4 =