೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ ಧುರೀಣ ಅಮರನಾಥ ಜಾರಕಿಹೊಳಿ.!
ಗೋಕಾಕ: ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ ಎಂದು ಯುವ ಧುರೀಣ ಅಮರನಾಥ ಜಾರಕಿಹೊಳಿ ಹೇಳಿದರು.
ಅವರು, ಗುರುವಾರದಂದು ಇಲ್ಲಿಯ ಶ್ರೀ ಲಕ್ಷಿö್ಮÃದೇವಿ ದೇವಸ್ಥಾನದ ಹತ್ತಿರ ೧.೬೦ ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಎರಡು ದಶಕಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರು ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ಯಾತೀತವಾಗಿ ಎಲ್ಲರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಬಾರಿಯೂ ಅವರನ್ನು ತಾವುಗಳು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದಿರಿ. ಶಾಸಕ ರಮೇಶ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಬದ್ಧರಿದ್ದು ಮುಂದೆಯೂ ಕ್ಷೇತ್ರದ ಜನತೆ ಸಹಕರಿಸುವಂತೆ ಮನವಿ ಮಾಡಿದರು.
ಗೋಕಾಕ ನಗರದ ವಿವಿಧ ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರ ಮಾರ್ಗದರ್ಶನದಲ್ಲಿ ಚಾಲನೆ ನೀಡಲಾಗಿದ್ದು ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವದು ನಗರದ ಜನತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ರಾಜಶೇಖರ ಕಂಬಾರ, ಬಸವರಾಜ ಉಳ್ಳಾಗಡ್ಡಿ, ರಮೇಶ ಉಳ್ಳಾಗಡ್ಡಿ, ದುಂಡಪ್ಪ ಕಿರಗಿ, ಕೃಷ್ಣ ಕುಲಕರ್ಣಿ, ವಿಜಯ ಅರಭಾಂವಿ, ಸಂಜು ಜಡೆನ್ನವರ, ಈರಣ್ಣ ತಿಳಗಂಜಿ, ಕಲ್ಲೊಳೆಪ್ಪ ಬಾಗಲಕೋಟಿ ಸೇರಿದಂತೆ ಅನೇಕರು ಇದ್ದರು.