ಬೆಳಗಾವಿಯಲ್ಲಿ ಇಂದು 13 ಜನರಿಗೆ ಕೊರೊನಾ ಸೊಂಕು
ಬೆಳಗಾವಿ .ಜು: ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಅರ್ಭಟ ಮುಂದುವರೆದಿದ್ದು ಇಂದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 13 ಜನರಿಗೆ ಕೊರೊನಾ ಸೊಂಕು ತಗುಲಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ಎರಡು ಕುಟುಂಬದ 8 ಸದಸ್ಯರಿಗೆ ಕೊರೊನಾ ಸೊಂಕು ತಗುಲಿದೆ. ಅದಲ್ಲದೇ ಕಳೆದ ಮೂರು ದಿನಗಳ ಹಿಂದೆ ಕಳ್ಳತನ ಆರೋಪದ ಮೇಲೆ ಬಂಧಿತನಾದ ಆರೋಪಿಗೂ ಕೊರೊನಾ ಸೊಂಕು ತಗುಲಿದೆ. ಇದರಿಂದ ಬೆಳಗಾವಿ ನಗರದ ಕ್ಯಾಂಪ ಪೋಲಿಸ್ ಠಾಣೆಯ ಸಿಬ್ಬಂದಿ ಯಲ್ಲಿ ದುಗುಡಿನ ವಾತಾವರಣ ಸೃಷ್ಟಿಯಾಗಿದ್ದು , ಓರ್ವ ಇನ್ಸಪೆಕ್ಟರ ಸೇರಿದಂತೆ 10 ಸಿಬ್ಬಂದಿಯನ್ನು ಕ್ವಾರಂಟೈನನಲ್ಲಿ ಇರಿಸಲಾಗಿದೆ. ಸಧ್ಯಕ್ಕೆ ಕ್ಯಾಂಪ ಪೊಲೀಸ್ ಠಾಣೆಯನ್ನು ಸಿಲಡೌನ ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸದಾಶಿವ ನಗರದ ನರ್ಸ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.
ಬೆಳಗಾವಿ ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ಓರ್ವರಿಗೆ, ಮಜಗಾಂವ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೊಂಕು ತಗುುಲಿದೆ.
9 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೋವಿಡ್-೧೯ ಸೋಂಕು ತಗುಲಿದ್ದ 9 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ಜಿಲ್ಲೆಯ 8 ಜನರು ಹಾಗೂ ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಒಬ್ಬರು ಸೇರಿದಂತೆ 9 ಜನರನ್ನು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಬಿಡುಗಡೆಗೊಳಿಸಲಾಗಿದೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿಡುಗಡೆ ಹೊಂದಿದವರ ವಿವರ:
ಪಿ-5406,ಪಿ-5408,ಪಿ-7390
ಪಿ-10325 ,ಪಿ-10324,ಪಿ-10322
ಪಿ-12146,ಪಿ-12147,ಪಿ-12148
ಇವರು ಬಿಡುಗಡೆ ಹೊಂದಿದ್ದಾರೆ.
ರಾಜ್ಯದ ವರದಿ: ಇಂದು ರಾಜ್ಯದಲ್ಲಿಯೂ ಸಹ ಕೊರೊನಾ ಸೊಂಕು ತೀವ್ರವಾಗಿ ಹರಡುತ್ತಿದ್ದು ಇಂದಿನ ದಿನ ಒಟ್ಟು 1694 ಜನರಿಗೆ ಕೊರೊನಾ ಸೊಂಕು ತಗುಲಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿಯೇ ಸಾವಿರ ಹತ್ತಿರ ಕೊರೊನಾ ತಲುಪಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 994, ಬಳ್ಳಾರಿ ಮತ್ತು ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ತಲಾ 97, ಕಲಬುರಗಿ ಜಿಲ್ಲೆಯಲ್ಲಿ 72, ತುಮಕೂರು ಜಿಲ್ಲೆಯಲ್ಲಿ 57, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 44, ಧಾರವಾಡ ಜಿಲ್ಲೆಯಲ್ಲಿ 38, ಮೈಸೂರು ಜಿಲ್ಲೆಯಲ್ಲಿ 35, ಮಂಡ್ಯ ಜಿಲ್ಲೆಯಲ್ಲಿ 33, ಬೀದರ ಜಿಲ್ಲೆಯಲ್ಲಿ 28, ಚಾಮರಾಜನಗರ ಜಿಲ್ಲೆಯಲ್ಲಿ 24, ಶಿವಮೊಗ್ಗ ಜಿಲ್ಲೆಯಲ್ಲಿ 23, ಗದಗ ಜಿಲ್ಲೆಯಲ್ಲಿ 19, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ತಲಾ 16, ಯಾದಗಿರಿ ಜಿಲ್ಲೆಯಲ್ಲಿ 14, ಹಾಸನ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ 13, ಕೋಲಾರ ಜಿಲ್ಲೆಯಲ್ಲಿ 11, ರಾಮನಗರ ಜಿಲ್ಲೆಯಲ್ಲಿ 9, ದಾವಣಗೆರೆ ಮತ್ತು ಉತ್ತರ ಕನ್ನಡ
ಜಿಲ್ಲೆಯಲ್ಲಿ ತಲಾ 5, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ 4, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ 3 ಹಾಗೂ ಹಾವೇರಿ ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.