ವಿನಾಯಕ ಅಂಗಡಿ ಚಿನ್ನ ಗೆಲ್ಲುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ-ಶಾಸಕ ರಮೇಶ ಜಾರಕಿಹೊಳಿ.!
ಗೋಕಾಕ: ತಾಲೂಕಿನ ಅಂಕಲಗಿ (ಮಲಾಮರಡಿ) ಗ್ರಾಮದ ಯುವಕ ವಿನಾಯಕ ಅಂಗಡಿ ಮೈಸೂರು ದಸರಾ ಸಿಎಮ್ ಕಪ್ 2023-24ರ ಕ್ರೀಡಾಕೂಟದ ಓಟದ ಸ್ಫರ್ಧೇಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಸೋಮವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಕ್ರೀಡಾಪಟು ವಿನಾಯಕ ವೀರುಪಾಕ್ಷ ಅಂಗಡಿ ಅವರನ್ನು ಸತ್ಕರಿಸಿ ಮಾತನಾಡಿ, ಮೈಸೂರಿನಲ್ಲಿ ನಡೆದ ೮೦೦ಮೀಟರ್ ಓಟದಲ್ಲಿ ಕೇವಲ ೧.೫೫ ನಿಮಿಷಗಳಲ್ಲಿ ಓಟವನ್ನು ಕ್ರಮಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾನೆ ಅವನ ಮುಂದಿನ ಕ್ರೀಡಾ ಭವಿಷ್ಯ ಉಜ್ವಲವಾಗಿರಲಿ. ಈ ಸಾಧನೆಗೆ ತೃಪ್ತಿ ಪಡದೇ ಮುಂದೆ ಸಾಗಬೇಕು ಅದು ಒಲಿಂಪಿಕ್ ಸಾಧನೆ ಆಗಬೇಕು ಎಂದರು.
ಸಂತೋಷ ಪಡಬೇಕು, ಆದರೆ ತೃಪ್ತಿ ಪಡಬಾರದು. ಗುರಿ ತಲುಪುವ ತನಕ ನಿರಂತರ ಮುನ್ನಡೆಯಬೇಕು. ವಿನಾಯಕ ಸಾಧನೆ ರಾಜ್ಯವಷ್ಟೇ ಅಲ್ಲದೇ ರಾಷ್ಟ್ರದ ಕೀರ್ತಿ ಬೆಳಗುವಂತಾಗಬೇಕು. ಸಾಧನೆ ಮಾಡುವದರ ಜೊತೆ ನಿರಂತರ ಛಲ ಉಳಿಸಿಕೊಳ್ಳುವ ಕಾರ್ಯ ಕೂಡ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಕಾಂತು ಎತ್ತಿನಮನಿ, ವೀರುಪಾಕ್ಷ ಅಂಗಡಿ, ಹನಮಂತ ದುರ್ಗನ್ನವರ, ಸುರೇಶ ಸನದಿ, ಮುನ್ನಾ ದೇಸಾಯಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಅಶೋಕ ಗೋಣಿ, ಗಂಗಪ್ಪ ಅಂಗಡಿ, ಮಾರುತಿ ನಾರಿ ಸೇರಿದಂತೆ ಅನೇಕರು ಇದ್ದರು.