Breaking News

ವಿಜೃಂಭಣೆಯಿ0ದ ಜರುಗಿದ ಯುವ ಧುರೀಣ ಅಮರನಾಥ ಜಾರಕಿಹೊಳಿ ಜೊತೆ ಅಶ್ವಿನಿಯವರ ವಿವಾಹ ಮಹೋತ್ಸವ.!

Spread the love

ವಿಜೃಂಭಣೆಯಿ0ದ ಜರುಗಿದ ಯುವ ಧುರೀಣ ಅಮರನಾಥ ಜಾರಕಿಹೊಳಿ ಜೊತೆ ಅಶ್ವಿನಿಯವರ ವಿವಾಹ ಮಹೋತ್ಸವ.!


ಗೋಕಾಕ: ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ, ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ದ್ವೀತಿಯ ಸುಪುತ್ರ, ಯುವ ಧುರೀಣ ಅಮರನಾಥ ಜೊತೆ ಅಶ್ವಿನಿಯವರ ವಿವಾಹ ಮಹೋತ್ಸವ ವಿಜೃಂಭಣೆಯಿAದ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಜರುಗಿತು.
ಈ ವಿವಾಹ ಸಮಾರಂಭದಲ್ಲಿ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಜಿ, ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ, ಅಂಕಲಗಿ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಸ್ವಾಮಿಜಿ, ಅರಭಾಂವಿ ದುರದುಂಡೇಶ್ವರ ಮಠದ ಗುರುಬಸವಲಿಂಗ ಸ್ವಾಮಿಜಿ, ಸುಣಧೋಳಿಯ ಶ್ರೀ ಅಭಿವನಶಿವಾನಂದ ಸ್ವಾಮಿಜಿ ಸೇರಿದಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಜಾರಕಿಹೊಳಿ ಕುಟುಂಬದ ಯುವ ನಾಯಕರುಗಳಾದ ಸಂತೋಷ, ಪ್ರಿಯಾಂಕಾ, ಸನತ, ಸರ್ವೋತ್ತಮ, ರಾಹುಲ, ಆದಿತ್ಯ ಹಾಗೂ ಜಾರಕಿಹೊಳಿ ಮತ್ತು ಪಾಟೀಲ ಕುಟುಂಬ ಮದುವೆ ಸಂಭ್ರಮದಲ್ಲಿ ಮಿಂದೆದ್ದರು. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, ಶಾಸಕರುಗಳಾದ ಬಸವನಗೌಡ ಪಾಟೀಲ ಯತ್ನಾಳ, ದುರ್ಯೋಧನ ಐಹೊಳೆ, ಸಿದ್ದು ಸವದಿ, ಮಾಜಿ ಶಾಸಕರುಗಳಾದ ಮಾಲಿಕಯ್ಯ ಗುತ್ತೇದಾರ, ವಿವೇಕರಾವ ಪಾಟೀಲ, ಕೆ ಶಿವನಗೌಡ ನಾಯಕ, ಪಿ ರಾಜೀವ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ಬಸವರಾಜ ದಡೇಗಸೂರ, ಜಗದೀಶ್ ಮೆಟಗುಡ್ಡ, ಪ್ರತಾಪರಾವ ಪಾಟೀಲ, ಸಂಜಯ ಪಾಟೀಲ ಬಿಜೆಪಿ ಮುಖಂಡರುಗಳಾದ ಸುಭಾಸ ಪಾಟೀಲ, ರತ್ನಾ ಮಾಮನಿ, ನಾಗೇಶ ಮುನ್ನೋಳಕರ, ಕಾಂಗ್ರೇಸ್ ಮುಖಂಡರಾದ ಶ್ಯಾಮ ಘಾಟಗೆ, ವಿನಯ ನಾವಲಟ್ಟಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಗಣ್ಯಾತಿಗಣ್ಯರು, ಮೂಡಲಗಿ-ಗೋಕಾಕ ತಾಲೂಕಿನ ಸಾರ್ವಜನಿಕರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

14 − five =