ಹಿಂಜಾವೇ ಹಮ್ಮಿಕೊಂಡ ಬೃಹತ್ ಹಲಿಗೆ ಹಬ್ಬಕ್ಕೆ ಗಣ್ಯರಿಂದ ಚಾಲನೆ.!

ಗೋಕಾಕ: ಹಿಂದೂ ಜಾಗರಣ ವೇದಿಕೆ ಗೋಕಾಕ ಘಟಕದಿಂದ ಹಮ್ಮಿಕೊಂಡ ಬೃಹತ್ ಹಲಿಗೆ ಹಬ್ಬಕ್ಕೆ ಶುಕ್ರವಾರದಂದು ನಗರದ ಕೊಳವಿ ಹನುಮಾನ ದೇವಸ್ಥಾನದಿಂದ ಚಾಲನೆ ನೀಡಲಾಯಿತು.
ಬೃಹತ್ ಹಲಿಗೆ ಹಬ್ಬದ ಕಾರ್ಯಕ್ರಮದಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಸಾಂಪ್ರದಾಯಿಕ ವೇಷಭೂಷಣದಗಳಲ್ಲಿ ಹಲಿಗೆ ಬಾರಿಸುತ್ತ ಮೆರವಣಿಗೆ ಮೂಲಕ ಸಂಗೋಳ್ಳಿ ರಾಯಣ್ಣ ವೃತ್ತದ ವರೆಗೆ ಸಾಗಿತು.
ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಪ್ರಮುಖರಾದ ಎಮ್ ಐ ಹಾರುಗೇರಿ, ಎಮ್ ಡಿ ಚುನಮರಿ, ಪ್ರಕಾಶ ವರ್ಜಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಅಂಕುಶ ರೇಣಕೆ, ಸಾಯಿ ಕೋಸಂದರ, ವಿಶ್ವ ಹಿಂದು ಪರಿಷತ ಪ್ರಮುಖ ಸದಾಶಿವ ಗುದಗಗೋಳ ಸೇರಿದಂತೆ ನೂರಾರು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.
YuvaBharataha Latest Kannada News