Breaking News

ಬಿಜೆಪಿ ಅಭ್ಯರ್ಥಿ ಜಗದೀಶ ಶೇಟ್ಟರ ಅವರಿಂದ ಗೋಕಾಕನ ವಿವಿಧ ಮಠಾಧೀಶರ ಭೇಟಿ.!

Spread the love

ಬಿಜೆಪಿ ಅಭ್ಯರ್ಥಿ ಜಗದೀಶ ಶೇಟ್ಟರ ಅವರಿಂದ ಗೋಕಾಕನ ವಿವಿಧ ಮಠಾಧೀಶರ ಭೇಟಿ.!

ಗೋಕಾಕ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೇಟ್ಟರ ಗೋಕಾಕ ವಿಧಾನ ಸಭಾ ಕ್ಷೇತ್ರದ ದೇವಸ್ಥಾನಗಳು, ವಿವಿಧ ಮಠಾಧೀಶರು ಭೇಟಿ ಮಾಡಿ ಆಶೀರ್ವಾಧ ಪಡೆದರು.
ಅಂಕಲಗಿ ಹಾಗೂ ಕುಂದರಗಿಯ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಸ್ವಾಮಿಜಿ, ಹುಲಿಕಟ್ಟಿಯ ಶ್ರೀ ಶಿವಲಿಂಗೇಶ್ವರ ಸ್ವಾಮಿಜಿ, ಮಮದಾಪೂರದ ಚರಮೂರ್ತೇಶ್ವರ ಸ್ವಾಮಿಜಿ, ಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಠದ ಶ್ರೀ ಕುಮಾರೇಂದ್ರ ಸ್ವಾಮಿಜಿ, ಮಲ್ಲಾಪೂರ ಪಿಜಿಯ ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜು ಸ್ವಾಮಿಜಿ, ಕರ್ಪೂರಮಠದ ಶ್ರೀ ವೀರುಪಾಕ್ಷ ಸ್ವಾಮಿಜಿ, ಮರಡಿಮಠದ ಶ್ರೀ ಪವಾಡೇಶ್ವರ ಸ್ವಾಮಿಜಿ, ನಗರದ ಶೂನ್ಯ ಸಂಪಾದನ ಮಠ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ, ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಸ್ವಾಮಿಜಿಯವರನ್ನು ಭೇಟಿ ಮಾಡಿ ಆಶೀರ್ವಾಧ ಪಡೆದು ಶ್ರೀಗಳನ್ನು ಸತ್ಕರಿಸಿದರು.

ಮುಖ್ಯಮಂತ್ರಿ ಜಗದೀಶ ಶೇಟ್ಟರ ಮಾತನಾಡಿ, ನಾನು ಅಭ್ಯರ್ಥಿಯಲ್ಲಿ ಪ್ರಧಾನಿ ಮೋದಿ ನಮ್ಮೆಲ್ಲರ ಅಭ್ಯರ್ಥಿ. ದೇಶದ ಸುರಕ್ಷತೆ ಹಾಗೂ ದಕ್ಷ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಬಹಳ ಅವಶ್ಯವಿದೆ. ೪೦೦ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಮೋದಿಯವರ ಗುರಿಯನ್ನು ಕಾರ್ಯಗತಮಾಡಲು ಕಾರ್ಯಕರ್ತರು ಶ್ರಮಿಸಬೇಕು. ಸಮೀಕ್ಷಗಳು ಸಹ ಇದನ್ನೇ ಹೇಳುತ್ತಿವೆ. ಜಗತ್ತಿನಲ್ಲೇ ಭಾರತ ದೇಶವನ್ನು ನಂ-೧ ಸ್ಥಾನಕ್ಕೆ ಎರಿಸಲು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ನಾನು ಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದೆ ಎರಡು ಬಾರಿ ಉಸ್ತುವಾರಿ ಸಚಿವನಾಗಿ ಜನರ ಸಮಸ್ಯೆಗಳಿಗೆ ಸ್ಫಂಧಿಸಿದ್ದೇನೆ. ಜಿಲ್ಲೆಯ ಅವಶ್ಯಕತೆಗಳ ಬಗ್ಗೆ ನನಗೆ ಸಂಪೂರ್ಣವಾದ ಮಾಹಿತಿ ಇದ್ದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ನನಗೆ ಜನತೆ ಆಶೀರ್ವಧಿಸಬೇಕು. ಕಾರ್ಯಕರ್ತರು ನನ್ನನ್ನು ಹೆಚ್ಚಿನ ಮತಗಳ ಅಂತರದಿAದ ಗೆಲ್ಲಿಸಲು ಪ್ರಯತ್ನಶೀಲರಾಗುವಂತೆ ಮನವಿ ಮಾಡಿದರು.

ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಗ್ರಾಮಗಳ ಪ್ರಮುಖರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಗೆ ಮತವನ್ನು ನೀಡಿ ನನ್ನನ್ನು ಆಯ್ಕೆ ಮಾಡುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಯುವ ನಾಯಕರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಒಡೆಯರ, ಮುಖಂಡರುಗಳಾದ ಕಿರಣ ಜಾಧವ, ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಭೀಮಗೌಡ ಪೋಲಿಸಗೌಡ್ರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಹನುಮಂತ ದುರ್ಗನ್ನವರ, ಲಕ್ಷö್ಮಣ ತಪಸಿ, ಪ್ರಮೋದ ಜೋಶಿ, ಸುರೇಶ ಕಾಡದವರ, ಪುಂಡಲೀಕ ವಣ್ಣೂರ, ಅಡಿವೆಪ್ಪ ನಾವಲಗಟ್ಟಿ, ವೀರುಪಾಕ್ಷ ಅಂಗಡಿ, ಬಸವರಾಜ ಪಟ್ಟಣಶೆಟ್ಟಿ, ಶಂಕರ ಬೂಶನ್ನವರ, ಸುನೀಲ ನಾಯ್ಕ, ಶಿವು ಪಾಟೀಲ, ಕೆಂಪಣ್ಣ ಪಾಟೀಲ, ಅಶೋಕ ಗೋಣಿ, ಅಶೋಕ ಹುಲಿಕಟ್ಟಿ, ರಂಗಪ್ಪ ನಂದಿ, ಬಾಳಯ್ಯ ಅಜ್ಜನವರ, ಸಿದ್ದಪ್ಪ ಆಡಿನ, ಶಂಕರಗೌಡ ಪಾಟೀಲ, ಸುರೇಶ ಪಾಟೀಲ, ರಾಮಣ್ಣ ಹುಕ್ಕೇರಿ, ಪ್ರಕಾಶ ಕರನಿಂಗ, ಧರೇಪ್ಪ ಮಗದುಮ, ರಮೇಶ ಚಿಕ್ಕೋಡಿ ಸೇರಿದಂತೆ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲಗಳ ವಿವಿಧ ಮೋರ್ಚಾ ಪದಾಧಿಕಾರಿಗಳು ಅನೇಕರು ಇದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

14 + 8 =