ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಮಂತ್ರಿ ಜಿ ಪರಮೇಶ್ವರ ಅವರುಗಳ ಸಿಡಿ ಬಂದರೂ ಬರಬಹುದು-ಶಾಸಕ ರಮೇಶ ಜಾರಕಿಹೊಳಿ.!
ಗೋಕಾಕ: ಪ್ರಜ್ವಲ್ ರೇವಣ್ಣ ಕೇಸನಲ್ಲಿ ಆಡಿಯೋ ಸುತ್ತು ಹಾಕಿದರೆ ನನ್ನ ಕೇಸನಲ್ಲಿ ನೇರವಾಗಿ ಡಿಕೆಶಿ ಮಾತನಾಡಿರುವ ಸಾಕ್ಷಿ ಇದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ನ್ಯೂ ಇಂಗ್ಲೀಷ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆ ಸಂಖ್ಯೆ ೧೩೮ರಲ್ಲಿ ತಮ್ಮ ಮತ ಚಲಾಯಿಸಿದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಸಿಡಿ ಕೇಸ್‌ನಲ್ಲಿ ಡಿಕೆಶಿ ನೇರವಾಗಿ ಭಾಗಿಯಾದ ಬಗ್ಗೆ ನನ್ನ ಬಳಿ ಸಾಕ್ಷಿ ಇವೆ. ಸಿಬಿಐ ತನಿಖೆಗೆ ಒಳಪಡಿಸಿದರೆ ಅವುಗಳನ್ನು ನೀಡುವದಾಗಿ ತಿಳಿಸಿದರು.
ಸಿಡಿ ಪ್ರಕರಣಗಳನ್ನು ಸಿಬಿಐಗೆ ವಹಿಸಿ ಹಾಲಿ ಸುಪ್ರೀಂ ಕೋರ್ಟ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆಗೆ ಒಳಪಡಿಸಿ ನಿಷ್ಪಕ್ಷಪಾತವಾಗಿ ಜನರ ಮುಂದಿಡಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಮಂತ್ರಿ ಜಿ ಪರಮೇಶ್ವರ ಅವರುಗಳ ಸಿಡಿ ಬಂದರೂ ಬರಬಹುದು ಈ ಷಡ್ಯಂತ್ರದ ಹಿಂದಿರುವ ಮುಖಗಳನ್ನು ಬಯಲಿಗೆಳೆಯುವಂತೆ ಹೇಳಿದರು.
ಮಹಾನ್ ನಾಯಕ ಬಹಳಷ್ಟು ಪ್ರಭಾವಿ ಇದ್ದು, ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡುತ್ತೇನೆ ಅನ್ನೋ ಸೊಕ್ಕು ಇದೆ. ನನ್ನ ಕೇಸ್‌ನಲ್ಲಿ ಬರೀ ಡಿಕೆ ಶಿವಕುಮಾರ್ ಅಷ್ಟೇ ಭಾಗಿಯಾಗಿಲ್ಲ. ನಮ್ಮವರೂ ಇದ್ದಾರೆ ಜೂನ್ ೪ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದ ಅವರು, ಪ್ರಜ್ವಲ್ ರೇವಣ್ಣ ಕೇಸ್ ಯಾರು ಹೆಮ್ಮೆ ಪಡುವ ವಿಷಯ ಅಲ್ಲ. ಎಲ್ಲರೂ ತಲೆ ತಗ್ಗಿಸುವ ವಿಷಯ, ಬಹಳ ಕೆಟ್ಟ ಪ್ರಮಾಣದಲ್ಲಿ ಆಗಿದೆ. ರೇವಣ್ಣ ಕಾನೂನು ರೀತಿ ಹೋರಾಟ ಮಾಡಲಿ ಕಾನೂನು ಒಂದೇ ಅದಕ್ಕೆ ಉತ್ತರ ಎಂದರು.
ಬಿಜೆಪಿಗೆ ರಾಜ್ಯದಲ್ಲಿ ಮತದ ಪ್ರಮಾಣ ಜಾಸ್ತಿಯಾಗಿದೆ. ೨೮ ಕ್ಷೇತ್ರಗಳ ಪೈಕಿ ೨೨ರಿಂದ ೨೪ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಮೋದಿ ಹೇಳಿದ್ದಾರೆ ಅಬ್ ಕಿ ಬಾರ್, ಚಾರ್ ಸೋ ಫಾರ್ ಎಂದು ಆದರೆ ಅದಕ್ಕಿಂತ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲಲಿವೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳು ಪ್ರಬಲರೆಂದೆ ನಾವು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಎರಡು ಲಕ್ಷ ಮತಗಳಿಂದ ಗೆಲ್ಲುತ್ತೇವೆ ಎನ್ನುವ ವಿರೋಧಿಗಳು ಹತಾಶರಾಗಿದ್ದಾರೆಂದು ತಿಳಿದುಕೊಳ್ಳಬೇಕು. ಜಗದೀಶ್ ಶೆಟ್ಟರ್ ಅಷ್ಟೇ ಅಲ್ಲ ದೇಶಾದ್ಯಂತ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ ಎಂದರು.
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಹಂಚಿಕೆ ಆರೋಪ ವಿಚಾರವಾಗಿ ಮಾತನಾಡಿ, ಹಣ ಕೊಟ್ಟು ಮತ ತೆಗೆದುಕೊಳ್ಳುವುದಾದದರೆ ಎಲ್ಲರೂ ಎಂಪಿ, ಎಂಎಲ್‌ಎ ಆಗ್ತಾರೆ. ಹಣದಿಂದ ಗೆಲ್ಲುತ್ತೇವೆ ಎಂಬುದು ಸಾಧ್ಯವಿಲ್ಲ. ಕ್ಯಾಂಡಿಡೇಟ್ ವೀಕ್ ಆದರೆ ಹಣ ಹಂಚುತ್ತಾರೆ. ಆತ್ಮವಿಶ್ವಾಸ ಇರುವ ಅಭ್ಯರ್ಥಿ ಹಣ ಹಂಚಲ್ಲ ಎಂದ ರಮೇಶ ಜಾರಕಿಹೊಳಿ ಪಕ್ಷ, ಮತದಾರರ ಮೇಲೆ ವಿಶ್ವಾಸ ಇದ್ರೆ ಹಣ ಹಂಚಲ್ಲ. ಕಾಂಗ್ರೆಸ್‌ನವರAತೆ ಬಿಜೆಪಿಯವರು ಈ ಮಟ್ಟಕ್ಕೆ ಇಳಿಯಲ್ಲ. ವಿರೋಧಿಗಳು ಮಾಡುವ ಆರೋಪಗಳಿಗೆ ಜೂನ್ ೪ರ ನಂತರ ಉತ್ತರ ನೀಡುತ್ತೇನೆ ಎಂದರು.