ಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- ಡಾ.ಮೋಹನ ಭಸ್ಮೆ.!
ಗೋಕಾಕ: ರಾಜಋಷಿ ಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲದಾರ ಡಾ.ಮೋಹನ ಭಸ್ಮೆ ಹೇಳಿದರು.
ಅವರು, ತಮ್ಮ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡ ರಾಜಋಷಿ ಭಗೀರಥರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ರಾಜಋಷಿ ಭಗೀರಥರು ತೋರಿದ ಸಮಾಜಪರ ಕಾಳಜಿ, ಕಳಕಳಿ ಅನುಸರಿಸಬೇಕು. ಸತ್ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು. ಭೂಮಿಗೆ ಗಂಗೆಯನ್ನು ಕರೆತರುವಲ್ಲಿ ಕಠೋರ ತಪಸ್ಸು ಮಾಡಿದ ಭಗೀರಥರು ಸವಾಲು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನಲ್ಲಿ ಒಲಿಸಿಕೊಂಡು ಭೂಮಿಯ ನೀರಿನ ಕೊರತೆ ನೀಗಿಸಿದರು. ಭಗೀರಥರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಇಂದಿನ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದ ಉಪಾಧ್ಯಕ್ಷರಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ಉಪ್ಪಾರ ಔದ್ಯೋಗಿಕ ಸಹಕಾರಿ ಸಂಘದ ಅಧ್ಯಕ್ಷ ಮಾಯಪ್ಪ ತಹಶೀಲದಾರ ಮುಖಂಡರುಗಳಾದ ಯಲ್ಲಪ್ಪ ಹೆಜ್ಜೆಗಾರ, ಸದಾಶಿವ ಗುದಗೋಳ, ಅಡಿವೆಪ್ಪ ರಾ ಬಿಲಕುಂದಿ, ಯಲ್ಲಪ್ಪ ಸುಳ್ಳನವರ, ರೇವಪ್ಪ ದುರದುಂಡಿ, ನಾಗರಾಜ ತಹಶೀಲದಾರ, ಗಣಪತಿ ರಂಕಣಕೊಪ್ಪ, ಯಲ್ಲಪ್ಪ ಗೋಸಬಾಳ, ವಾಯ್ ಕೆ ಕೌಜಲಗಿ, ನಂದಿ, ವಿಠ್ಠಲ ಮುರ್ಕಿಭಾಂವಿ ಸೇರಿದಂತೆ ಭಗೀರಥ ಉಪ್ಪಾರ ಸಮಾಜ ಭಾಂದವರು ಇದ್ದರು.