ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯ ಸಿಬ್ಬಂಧಿಗೆ ಬೇದರಿಕೆಯೊಡ್ಡಿದ ರಮೇಶ ಧರ್ಮಪ್ಪ ತಳವಾರ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ .!
ಗೋಕಾಕ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯ ಸಿಬ್ಬಂಧಿಗೆ ಬೇದರಿಕೆಯೊಡ್ಡಿದ ಹಿನ್ನಲೆ ನಗರದ ರಮೇಶ ಧರ್ಮಪ್ಪ ತಳವಾರ ೬೫ ಎಂಬುವರ ಮೇಲೆ ಬೆಂಗಳೂರಿನ ವಿಧಾನಸೌಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯ ಸಿಬ್ಬಂಧಿ ಎಸ್ ಸಂತೋಷಕುಮಾರ ಅವರಿಗೆ ಇಲ್ಲಿಯ ಆದಿತ್ಯ ನಗರ ಕುರುಬರದಡ್ಡಿ ನಿವಾಸಿ ರಮೇಶ ಧರ್ಮಪ್ಪ ತಳವಾರ ಎಂಬ ವ್ಯಕ್ತಿ ತನ್ನ ಪತ್ನಿ ನಂದಬಾಬು ಹೊಸಮನಿ ಅವರ ನೇಮಕಾತಿ ವಿಚಾರಕ್ಕೆ ಸಂಬAಧಿಸಿದAತೆ ಸುಮಾರು ೨೫ವರ್ಷಗಳಿಂದ ಅರ್ಜಿಗೆ ಸಂಬAಧಿಸಿದAತೆ ಕಚೇರಿಗೆ ಭೇಟಿ ನೀಡುತ್ತಿದ್ದರು. ರಮೇಶ ತಳವಾರ ಅವರು ನೀಡಿರುವ ಹಲವಾರು ಅರ್ಜಿಗಳನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯಿಂದ ನ್ಯಾಯಯುತವಾಗಿ ವಿಲೇವಾರಿ ಮಾಡಲಾಗಿದ್ದು, ದಿ.೨೮-೦೬-೨೦೨೩ ರಂದು ಮತ್ತೊಂದು ದೂರು ಅರ್ಜಿ ವಿಚಾರಣೆಗೆ ೩೦ವರ್ಷಗಳ ದಾಖಲಾತಿ ಸಂಗ್ರಹಿಸಬೇಕಾಗಿರುತ್ತದೆ. ಈ ವಿಷಯವಾಗಿ ಎಸ್ ಸಂತೋಷಕುಮಾರ ಅವರು ಕಚೇರಿಯಲ್ಲಿರುವ ಮತ್ತು ಮನೆಯಲ್ಲಿರುವ ಸಮಯದಲ್ಲಿ ಆರೋಪಿತ ರಮೇಶ ತಳವಾರ ದೂರವಾಣಿಯ ಮುಖಾಂತರ ನನ್ನ ಅರ್ಜಿಗೆ ಯಾವುದೇ ಕ್ರಮಕೈಗೊಂಡಿಲ್ಲವೆAದು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದು ಅಲ್ಲದೇ ನನ್ನ ಕೆಲಸ ಮಾಡಿಕೊಡದಿದ್ದರೆ ನಿನಗೆ ಒಂದು ಗತಿಕಾಣಿಸುವದಾಗಿ ಬೇದರಿಕೆಯೊಡಿದ್ದಾರೆ. ದಿ.೧೮-೦೪-೨೦೨೪ರಂದು ರಮೇಶ ತಳವಾರ ನನಗೆ ನ್ಯಾಯಸಿಗದಿದ್ದಲ್ಲಿ ನಿಮ್ಮ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಬೇದರಿಕೆ ಹಾಕುತ್ತಿದ್ದಾರೆ. ಹೀಗಾಗಿ ನಾನು ಕಚೇರಿಯಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಮಾನಸಿಕವಾಗಿ ತುಂಬ ನೊಂದಿದ್ದೇನೆ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ದಿ.೧೩-೦೫-೨೦೨೪ರಂದು ಬೆಂಗಳೂರಿನ ವಿಧಾನಸೌಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸಿದ್ದಾರೆ.