ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ.!
ಗೋಕಾಕ: ನಗರದ ಪೋಲಿಸ್ ಠಾಣೆಯ ಎದುರು ವ್ಯಕ್ತಿಯೋರ್ವ ಕುಳಿತು ಮಧ್ಯಸೇವನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕಳೆದ ರವಿವಾರದಂದು ಗೋಕಾಕ ಶಹರ ಪೋಲಿಸ್ ಠಾಣೆ ಎದುರು ಮಧ್ಯ ಸೇವನೆ ಮಾಡಿದ ವ್ಯಕ್ತಿ ದಿನದ ೨೪ಗಂಟೆ ಮಧ್ಯದಮಲಿನಲ್ಲಿರುತ್ತಾನೆ ಎಂದು ತಿಳಿದು ಬಂದಿದೆ. ಈತ ಗೋಕಾಕ ಶಹರ ಪೋಲಿಸ್ ಠಾಣೆ ಎದುರು ಮಧ್ಯದ ಬಾಟಲಿ, ಗ್ಲಾಸ್ ಹಾಗೂ ಸ್ನಾಕ್ಸ್ ಇಟ್ಟುಕೊಂಡು ನೆಲದ ಮೇಲೆ ಕುಳಿತು ಮಧ್ಯಸೇವನೆ ಮಾಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆಯೂ ಈತ ರಸ್ತೆ ಮಧ್ಯದಲ್ಲಿ ಕುಳಿತು ಮಧ್ಯಸೇವನೆ ಮಾಡುವದು ಹಾಗೂ ಮಧ್ಯದಮಲಿನಲ್ಲಿ ರಸ್ತೆಯ ಮಲಗುವದನ್ನು ಕಂಡು ಪೋಲಿಸರು ತಿಳಿಹೇಳಿದರು ಪ್ರಯೋಜನವಾಗಿಲ್ಲ. ರವಿವಾರದಂದು ಮಧ್ಯಸೇವನೆ ಮಾಡುವದನ್ನು ತಡೆಯಲು ಬಂದ ಮಹಿಳಾ ಪೋಲಿಸ್ ಸಿಬ್ಬಂಧಿಗೆ ಅವಾಜ್ ಹಾಕಿ ಕುಳಿತ ಸ್ಥಳದಿಂದ ಎದ್ದು ಪೋಲಿಸ್ ಠಾಣೆಯ ಗೇಟ್ ಬಳಿ ಮಧ್ಯಸೇವನೆ ಮಾಡಿ, ಅಲ್ಲಿಂದ ಪೋಲಿಸ್ ವಾಹನಕ್ಕೆ ತಾಗಿ ಮಲಗಿದ್ದಾಗಿ ತಿಳಿದು ಬಂದಿದೆ. ಮಧ್ಯದ ಅಮಲಿನಲ್ಲಿರುವ ವ್ಯಕ್ತಿನ್ನು ಠಾಣೆಗೆ ಎಳೆದೊಯ್ದರೆ ಅಥವಾ ಲಾಠಿ ರುಚಿ ತೋರಿಸಿದರೆ ಮೇಲಾಧಿಕಾರಿಗಳಿಂದ ಬೈಯ್ಯಿಸಿಕೊಳ್ಳುವದಾಗುತ್ತೆ ಎಂದು ಸಿಬ್ಬಂಧಿ ಸುಮ್ಮನೆ ಕುಳಿತಿದ್ದಾಗಿ ತಿಳಿದು ಬಂದಿದೆ. ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿರುವ ಬಗ್ಗೆ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಮನಸೊಇಚ್ಛೆ ಕಾಮೇಂಟಗಳನ್ನು ಮಾಡ ತೋಡಗಿದ್ದಾರೆ.