ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಏಳ್ಗೆಗೆ ಪ್ರಮುಖ ಪಾತ್ರ ವಹಿಸುತ್ತವೆ.- ಶಾಸಕ ರಮೇಶ ಜಾರಕಿಹೊಳಿ.!
ಗೋಕಾಕ: ತಾಲೂಕಿನ ಬೂದಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಬೂದಿಹಾಳ ಇದರ ಆಡಳಿತ ಮಂಡಳಿಯ ಅವಿರೋಧ ಆಯ್ಕೆಗೆ ಶ್ರಮಿಸಿದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ನೂತನ ಆಡಳಿತ ಮಂಡಳಿಯವರು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಏಳ್ಗೆಗೆ ಪ್ರಮುಖ ಪಾತ್ರ ವಹಿಸುತ್ತವೆ. ನೂತನ ಆಡಳಿತ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದ ಅವರು, ನೂತನ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂಧಿಸಿದರು.
ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿ ಸದಸ್ಯರಾದ ಅಡಿವೆಪ್ಪ ನಾವಲಗಟ್ಟಿ, ಸತ್ತೆಪ್ಪ ಪಾಟೀಲ, ಗಂಗಪ್ಪ ಅಂಗಡಿ, ರಾಜು ದೊಡ್ಡಮನಿ, ಲಕ್ಷö್ಮಣ ಮಾಳಗಿ, ವೀರಭದ್ರ ಕೊಳವಿ, ಕರೇಪ್ಪ ಹರಿಜನ, ಭೀಮಣ್ಣ ಸೋಮನಗಡಿ, ಸುಭಾಷ ಪೊಳಿ, ಅಲ್ಲಾಭಕ್ಷ ದೇಸಾಯಿ, ಜಾನಕ್ಕ ಪೋಲಿಸಗೌಡರ, ವೀಮಲಮ್ಮ ಸಂಪಗಾAವಿ ಇದ್ದರು.