Breaking News

ಶಿವಯೋಗಿಗೆ ಧರ್ಮಸೇವಾ ದುರಂಧರ, ರಶ್ಮಿ.ಎಸ್‌ಗೆ ಮಾಧ್ಯಮ ಸಿರಿ, ಸಿದ್ಧಾರ್ಥಗೆ ಸಮಾಜ ಸೇವಾ ರತ್ನ, ಸುಮಿತ್ರಾಗೆ ಆದರ್ಶ ಶಿಕ್ಷಕಿ, ಭುವನ್‌ಗೆ ಯುವ ಕ್ರೀಡಾ ಸಿರಿ ಪ್ರಶಸ್ತಿ ಪ್ರದಾನ

Spread the love

ಶಿವಯೋಗಿಗೆ ಧರ್ಮಸೇವಾ ದುರಂಧರ, ರಶ್ಮಿ.ಎಸ್‌ಗೆ ಮಾಧ್ಯಮ ಸಿರಿ, ಸಿದ್ಧಾರ್ಥಗೆ ಸಮಾಜ ಸೇವಾ ರತ್ನ, ಸುಮಿತ್ರಾಗೆ ಆದರ್ಶ ಶಿಕ್ಷಕಿ, ಭುವನ್‌ಗೆ ಯುವ ಕ್ರೀಡಾ ಸಿರಿ ಪ್ರಶಸ್ತಿ ಪ್ರದಾನ

ಹಾವೇರಿ: ಜಿಲ್ಲೆ ಶಿಗ್ಗಾಂವಿ ತಾಲೂಕು ಬಿಸನಳ್ಳಿ ಗ್ರಾಮದಲ್ಲಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಸಂಜೆ ವೀರಶೈವ ಅಷ್ಟಾವರಣ ವಿಜ್ಞಾನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವು ಡಿ.23 ರವರೆಗೆ ಜರುಗಲಿದೆ.

ಡಿ.21 ರಂದು ಬೆಳಗ್ಗೆ 7 ಗಂಟೆಗೆ ಕಾಶಿ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಪಾಠಪಾಲೆಯ ವಟುಗಳಿಂದ ಹಾಗೂ ಮಹಿಳಾ ರುದ್ರಾಣಿ ಬಳಗದವರಿಂದ ಶ್ರೀರುದ್ರ ಪಠಣ, ಮಹಾಪ್ರಸಾದ ಹಾಗೂ ಸಂಜೆ 5ಕ್ಕೆ ವೀರಶೇವ ಅಷ್ಟಾವರಣ ವಿಜ್ಞಾನ ಕಾರ್ಯಕ್ರಮ ಜರುಗಲಿದೆ.


ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು ಸಾನ್ನಿಧ್ಯ, ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯ ಇಂಜನಿಯರ್‌ ಶಿವಯೋಗಿ ಹಿರೇಮಠಗೆ-ಧರ್ಮಸೇವಾ ದುರಂಧರ, ಹಿರಿಯ ಪತ್ರಕರ್ತೆ ರಶ್ಮಿ.ಎಸ್‌ ಅವರಿಗೆ-ಮಾಧ್ಯಮ ಸಿರಿ, ಶಿಗ್ಗಾಂವಿ ಪುರಸಭೆ ಅಧ್ಯಕ್ಷ ಸಿದ್ಧಾರ್ಥ ಹನುಮಂತಗೌಡ ಪಾಟೀಲಗೆ-ಸಮಾಜ ಸೇವಾ ರತ್ನ, ಶಿಕ್ಷಕಿ ಸುಮಿತ್ರಾ ರುದ್ರಣ್ಣ ಚಂದರಗಿಗೆ-ಆದರ್ಶ ಶಿಕ್ಷಕಿ, ಭುವನ್‌ ಗದ್ದಿಗೆ-ಯುವ ಕ್ರೀಡಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.


ಬಿಜೆಪಿ ಯುವ ಮುಖಂಡ ರುದ್ರಣ್ಣ ಚಂದರಗಿ ಅವರಿಂದ ತುಲಾಬಾರ ಸೇವೆ ನಡೆಯುವುದು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಎಸ್‌.ಬೊಮ್ಮಾಯಿ, ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಚ.ಯಲಿಗಾರ, ಉದ್ಯಮಿ ನರಹರಿ ಕಟ್ಟಿ, ಶಿಗ್ಗಾಂವಿ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಹಾವೇರಿ ಶಿವಲಿಂಗೇಸ್ವರ ಪದವಿ ಪೂರ್ವ ಮಹಿಳಾ ಕಾಲೇಜಿನ ಅಧ್ಯಕ್ಷ ಪಿ.ಡಿ.ಶಿರೂರು ಸೇರಿದಂತೆ ಗಣ್ಯ ಮುಖಂಡರು ಆಗಮಿಸುವರು.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

three × two =