ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ನಕ್ಷೆಯಲ್ಲಿ ಬಿಡುವ ಮೂಲಕ ಬ್ಯಾನರ್ ಅಳವಡಿಸಿರುವ ಕಾಂಗ್ರೆಸ್ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿದೆ-ಸುಭಾಸ ಪಾಟೀಲ.!
ಗೋಕಾಕ: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ನಕ್ಷೆಯಲ್ಲಿ ಬಿಡುವ ಮೂಲಕ ಬ್ಯಾನರ್ ಅಳವಡಿಸಿರುವ ಕಾಂಗ್ರೆಸ್ ಪಕ್ಷ ತಮ್ಮ ನೇತಾರ ನೆಹರು ಅವರ ನಿಜ ಬಣ್ಣವನ್ನು ಬಯಲು ಮಾಡುವ ಮೂಲಕ ಆಚಣೆಗೆ ತರುತ್ತಿದ್ದಾರೆ. ಅವರ ದೇಶ ಪ್ರೇಮಕ್ಕೆ ಈ ಸಂಗತಿ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸುಭಾಸ ಪಾಟೀಲ ಹೇಳಿದರು.
ಅವರು, ನಗರದ ಬೂತ್ ನಂ ೧೫೧, ೧೫೨, ೧೫೩ರಲ್ಲಿ ಬಿಜೆಪಿ ಬೂತ್ ಸಮಿತಿ ರಚನಾ ಸಭೆ ಹಾಗೂ ಬೂತ್ ನಂ೧೫೧ರ ಬೂತ್ ಅಧ್ಯಕ್ಷರ ಮನೆಗೆ ಬಿಜೆಪಿ ಪಕ್ಷದ ಧ್ವಜಾರೋಹಣ ನಡೆಸಿ ಮಾತನಾಡಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಕಾಲದಲ್ಲೂ ಪಾಕ್ ಪರವಾಗಿವಾದ ಮಾಡುತ್ತಲಿದ್ದರು ಸದ್ಯ ಈಗಿನ ಕಾಂಗ್ರೆಸ್ ನಾಯಕರು ಅದನ್ನು ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಷ್ಟಿçÃಯ ಬಿಜೆಪಿ ಓಬಿಸಿ ಮೋರ್ಚಾ ಕರ‍್ಯಕಾರಿಣಿ ಸದಸ್ಯ ಲಕ್ಷö್ಮಣ ತಪಸಿ ಮಾತನಾಡಿ, ರಾಜನಾಥ ಸಿಂಗರವರು ರಾಷ್ಟ್ರೀಯ ಅಧ್ಯಕ್ಷರಾದ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ದೃಷ್ಟಿಯಿಂದ ಈ ಸಮಿತಿ ಸದಸ್ಯರ ನೇಮಕ ಮಾಡುವ ಕಾರ್ಯ ಜಾರಿಗೆ ತರಲಾಗಿದೆ. ನಗರ ೭೭ಬೂತ್ ಸಮಿತಿಯನ್ನು ಎರಡು ದಿನಗಳಲ್ಲಿ ರಚಿಸಿ ಬರುವ ಕೆಲವೆ ದಿನಗಳಲ್ಲಿ ಎಲ್ಲ ಬೂತ್‌ಗಳನ್ನೊಳಗೊಂಡು ಸಭೆ ನಡೆಸಲಾಗುವದು.
ಪ್ರದಾನಿ ನರೇಂದ್ರ ಮೋದಿಯವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬೂತ್ ಸಮೀತಿ ರಚನೆ ಮಾಡಬೇಕಿದೆ. ಪ್ರಧಾನಿ ಮೋದಿಯವರ ನೇತ್ರತ್ವದಲ್ಲಿ ಹಲವು ರಾಜ್ಯದ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಬೂತ್ ಸಮಿತಿ ರಚಣೆ ಹಾಗೂ ಪ್ರತಿ ತಿಂಗಳ ಸಭೆ ನಡೆಸಿ ಪಕ್ಷ ಸಂಘಟನೆ ನಡೆಸುವ ಮೂಲಕ ರಾಜ್ಯದಲ್ಲಿಯೂ ಸಹ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಜನಪ್ರತಿನಿಧಿಗಳ ಆಯ್ಕೆಗೆ ಶ್ರಮಿಸೋಣ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ಯುವಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಮುಖಂಡರಾದ ಪ್ರಮೋದ ಜೋಶಿ, ಕುಸುಮಾ ಖನಗಾಂವಿ, ಸಹೀರ ಕೋತವಾಲ, ಸಾಕೀಬ ಕೋತವಾಲ, ನಪೀಸಾ ಕೋತವಾಲ, ಆನಂದ ಖಾನಪ್ಪನವರ, ಸಂತೋಷ ಕೋಲಕಾರ, ಜಾಫರ ಸೈಯದ, ಮಲ್ಲಪ್ಪ ಪೂಜೇರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.