Breaking News

ಗೋಕಾಕ ಗ್ರಾಮ ದೇವತೆ ಜಾತ್ರಾ ಮಹೋತ್ಸವಕ್ಕೆ ಎಲ್ಲ ಅಧಿಕಾರಿಗಳು ಜಾತ್ರೆ ಸುವ್ಯವಸ್ಥಿತವಾಗಿ ಜರುಗಲು ಸಿದ್ಧತೆ ಮಾಡಿಕೊಳ್ಳಿ-ಶಾಸಕ ರಮೇಶ ಜಾರಕಿಹೊಳಿ.!

Spread the love

ಗೋಕಾಕ ಗ್ರಾಮ ದೇವತೆ ಜಾತ್ರಾ ಮಹೋತ್ಸವಕ್ಕೆ ಎಲ್ಲ ಅಧಿಕಾರಿಗಳು ಜಾತ್ರೆ ಸುವ್ಯವಸ್ಥಿತವಾಗಿ ಜರುಗಲು ಸಿದ್ಧತೆ ಮಾಡಿಕೊಳ್ಳಿ-ಶಾಸಕ ರಮೇಶ ಜಾರಕಿಹೊಳಿ.!

ಗೋಕಾಕ: ಪ್ರತಿ ಐದು ವರ್ಷಗಳಿಗೊಮ್ಮೆ ಜರುಗುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವನ್ನು ನಾವೆಲ್ಲರೂ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿAದ ಆಚರಿಸುವ ಮೂಲಕ ದೇವತೆಯರ ಅನುಗೃಹಕ್ಕೆ ಪಾತ್ರರಾಗೋಣ ಎಂದು ಶಾಸಕ ಹಾಗೂ ಜಾತ್ರಾ ಕಮೀಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ ಅವರು ಹೇಳಿದರು.
ಅವರು, ರವಿವಾರದಂದು ನಗರದ ಮಹಾಲಕ್ಷಿö್ಮÃ ಸಭಾ ಭವನದಲ್ಲಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಅಧಿಕಾರಿಗಳು ಪರಸ್ಪರ ಸಭೆಗಳನ್ನು ನಡೆಸುವ ಮೂಲಕ ಜಾತ್ರೆ ಸುವ್ಯವಸ್ಥಿತವಾಗಿ ಜರುಗಲು ಸಿದ್ಧತೆಗಳನ್ನು ಮಾಡಿಕೊಳ್ಳವಂತೆ ತಿಳಿಸಿದರು.
ನಗರಸಭೆಯವರು ರಸ್ತೆಗಳ ದುರಸ್ಥಿ, ನೀರು ಸರಬರಾಜು, ಹೆಚ್ಚಿನ ಶೌಚಾಲಯಗಳನ್ನು ಕಲ್ಪಿಸಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಎಲ್ಲ ರೀತಿಯ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಬೇಕು. ಲಕ್ಷಾಂತರ ಜನರು ಸೇರುವ ಈ ಜಾತ್ರೆಯಲ್ಲಿ ಯಾವುದೇ ಕೊರತೆಯಾಗದಂತೆ ಜಾಗೃತೆವಹಿಸಿ. ಆರೋಗ್ಯ ಇಲಾಖೆ ನಗರದಲ್ಲಿ ಹೆಚ್ಚಿನ ತುರ್ತು ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಬೇಕು. ಅಂಬ್ಯಲೇನ್ಸ್ ಸೌಲಭ್ಯದೊಂದಿಗೆ ಹೆಚ್ಚಿನ ಸಿಬ್ಬಂಧಿ ಹಾಗೂ ಔಷಧಗಳ ಕೊರತೆಯಾಗದಂತೆ ಸಿದ್ಧಪಡಿಸಿಕೊಳ್ಳಿ. ಪೋಲಿಸ್ ಇಲಾಖೆಯವರು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸದೆ ಶಾಂತ ರೀತಿಯಿಂದ ಜಾತ್ರೆಯಲ್ಲಿ ಜನತೆ ಪಾಲ್ಗೊಳ್ಳುವಂತೆ ಮುಂಜಾಗೃತಾಕ್ರಮಗಳನ್ನು ಕಟ್ಟು ನಿಟ್ಟಾಗಿ ಕೈಗೊಳ್ಳಿ. ಔಟ್ ಪೋಸ್ಟ ಪೋಲಿಸ್ ಸ್ಟೇಷನಗಳ ನಿರ್ಮಿಸಿ ದಿನದ ೨೪ಗಂಟೆಗಳ ಸೇವಾ ನಿರತರಾಗಿರಿ. ಹೆಚ್ಚಿನ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳನ್ನು ನಿಯೋಜಿಸಿ. ಹೆಸ್ಕಾಂ ಇಲಾಖೆಯಲ್ಲಿಯೂ ಅವಘಡಗಳು ಸಂಭವಿಸದAತೆ ಕ್ರಮಕೈಗೊಂಡು. ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಅವಶ್ಯಕ ಸ್ಥಳಗಳಲ್ಲಿ ಹೆಚ್ಚಿನ ವಿದ್ಯುತ ದೀಪ ಅಳವಡಿಸಿಕೊಳ್ಳಿ. ಸಾರಿಗೆ ಇಲಾಖೆಯವರು ಟ್ರಾಫೀಕ ಸಮಸ್ಯೆಯಾಗದಂತೆ ಹೆಚ್ಚಿನ ಸಿಟಿ ಬಸ್ಸುಗಳ ಸೌಲಭ್ಯಗಳನ್ನು ಕಲ್ಪಿಸಿ. ಎಪಿಎಮ್‌ಸಿಯಲ್ಲಿಯ ೨೦ಎಕರೆ ಸ್ಥಳವನ್ನು ತಾತ್ಕಾಲಿಕವಾಗಿ ಜಾತ್ರಾ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಳ್ಳಿ. ಎಪಿಎಮ್‌ಸಿ ರಸ್ತೆ ದುರಸ್ಥಿ ಶೀಘ್ರದಲ್ಲಿ ಪೂರ್ಣಗೊಳಿಸಿ. ನಗರದಲ್ಲಿ ಪಾರ್ಕಿಂಗ ಸಮಸ್ಯೆಗೆ ಹೆಚ್ಚಿನ ಮಹತ್ವ ನೀಡಿ. ಜಾತ್ರಾ ಸಮಯದಲ್ಲಿ ಸಿಸಿ ಕ್ಯಾಮೇರಾ ಹಾಗೂ ಡ್ರೋಣ ಕ್ಯಾಮೆರಾಗಳನ್ನು ಬಳಸಿ ಹೆಚ್ಚಿನ ರಕ್ಷಣೆ ಕ್ರಮಕೈಗೊಳ್ಳಿ. ನಗರದಲ್ಲಿ ಗಾಂಜಾ ಹಾಗೂ ಡ್ರಗ್ಸ್ನಂತಹ ದುಷ್ಚಟಗಳಿಗೆ ಇಂದಿನ ಯುವ ಪೀಳಿಗೆ ಬಲಿಯಾಗುತ್ತಿದ್ದು ಇದರ ವಿರುದ್ಧ ಪೋಲಿಸ್ ಇಲಾಖೆ ಶಿಕ್ಷಣ ಇಲಾಖೆ ಕಠೀಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆವಹಿಸಿ ಎಂದ ಅವರು ಅಧಿಕಾರಿಗಳು ಈ ಕಾರ್ಯಗಳ ಕುರಿತು ಪರಸ್ಪರ ಸಭೆಗಳನ್ನು ನಡೆಸಿ ನಿರಂತರ ವರದಿಯನ್ನು ನೀಡುವಂತೆ ಹೇಳಿದರು.
ಈ ಸಭೆಯಲ್ಲಿ ನಗರಸಭೆಯ ಅಧ್ಯಕ್ಷ ಪ್ರಕಾಶ ಮುರಾರಿ, ತಹಶೀಲದಾರ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ, ಡಿವೈಎಸ್‌ಪಿ ಡಿ ಎಚ್ ಮುಲ್ಲಾ, ಜಾತ್ರಾ ಕಮೀಟಿಯ ಸದಸ್ಯರು, ನಗರಸಭಾ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.


Spread the love

About Yuva Bharatha

Check Also

ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಗುರು ಮಹಾದೇವ ಅಜಯ್ಯನವರ 87ನೇ ಜಯಂತಿ!!

Spread the loveಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಗುರು ಮಹಾದೇವ ಅಜಯ್ಯನವರ 87ನೇ ಜಯಂತಿ!! ಯುವ ಭಾರತ ಸುದ್ದಿ ಗೋಕಾಕ: ಕಪರಟ್ಟಿ …

Leave a Reply

Your email address will not be published. Required fields are marked *

8 + 16 =