Breaking News

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love

ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹವರಿಗೆ ನಮ್ಮ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿ ಹೇಳುವಂತೆ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಕಾರ್ಯಕರ್ತರಿಗೆ ಕರೆ ನೀಡಿದರು.
      ನಗರದ ಎನ್ಎಸ್ಎಫ್ ಕಚೇರಿಯಲ್ಲಿ ಮಂಗಳವಾರ ಅರಭಾವಿ ಮಂಡಲ ಬಿಜೆಪಿ ಘಟಕದಿಂದ ಹಮ್ಮಿಕೊಂಡಿರುವ ವಿಬಿ- ಜೀ ರಾಮ್ ಜೀ ಜನ ಜಾಗೃತಿ  ಸಭೆಯಲ್ಲಿ ಮಾತನಾಡಿದ ಅವರು, ಯಾವಾಗ ಮಹಾತ್ಮಾ ಗಾಂಧೀ ಹೆಸರು ಬದಲಾಯಿಸಿ ಅದರಲ್ಲಿ ರಾಮ್ ಹೆಸರು ಸೇರಿತೋ ಆ ಕ್ಷಣದಿಂದ ಕಾಂಗ್ರೆಸ್ಸಿನಲ್ಲಿ ನಡುಕ ಹುಟ್ಟಿದೆ ಎಂದು ವ್ಯಂಗ್ಯವಾಗಿ ನುಡಿದರು.
     ಈ ಮೊದಲಿದ್ದ ಎಂ ನರೇಗಾ ಯೋಜನೆಯಲ್ಲಿ ಕೇವಲ 100 ದಿನಗಳ ಉದ್ಯೋಗವಿತ್ತು. ಆದರೆ ನಮ್ಮ ಕೇಂದ್ರ ಸರ್ಕಾರವು 125 ದಿನಗಳತನಕ ಉದ್ಯೋಗ ನೀಡಲಿದ್ದು, ಜತೆಗೆ ಕಾರ್ಮಿಕರಿಗೂ ಹೆಚ್ಚಿನ ದಿನಗೂಲಿ ನೀಡಲಿದೆ. 2047 ರ ವಿಕಸಿತ ಭಾರತದತ್ತ ದೂರದೃಷ್ಟಿ ಕೋನವನ್ನು ಇಟ್ಟುಕೊಂಡು ಗ್ರಾಮೀಣ ಉದ್ಯೋಗ ಸೃಷ್ಟಿಸಲಿದೆ. ಕೇಂದ್ರ ಸರ್ಕಾರವು ಇದಕ್ಕೆ ಶೇ. 60 ರಷ್ಟು ಅನುದಾನವನ್ನು ನೀಡಲಿದೆ. ಆದರೆ, ಕಾಂಗ್ರೆಸ್ ಪಕ್ಷದವರು ಹೆಸರು ಬದಲಾವಣೆಯ ನೆಪವೊಡ್ಡಿ ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮಹಾತ್ಮಾ ಗಾಂಧಿ ಬದಲು ಜೀ ರಾಮ್ ಜೀ ಹೆಸರು ಬದಲಾಯಿಸಿದ್ದೇ ಇದಕ್ಕೆ ಕಾರಣವಾಗಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವ ಕೆಲಸವನ್ನು ಮಾಡುವಂತೆಯೂ ಅವರು ಹೇಳಿದರು.
      2013 ರ ಬಜೆಟಿನಲ್ಲಿ ಮನ್ ರೇಗಾ ಯೋಜನೆಗೆ ಮೀಸಲಿಟ್ಟ ಹಣ 33 ಸಾವಿರ ಕೋಟಿ ರೂ. ಆದರೀಗ ಪ್ರಸ್ತುತ 2.18 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಕಾಂಗ್ರೆಸ್ಸಿನ ಅಪಪ್ರಚಾರಕ್ಕೆ ಕಿವಿಗೋಡದೇ ಮೋದಿಯವರ ವಿಕಸಿತ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸುವಂತೆ ಅವರು ಹೇಳಿದರು.
ರಾಜ್ಯ ಮಾಧ್ಯಮ ಸಮೀತಿ ಸದಸ್ಯ ಎಫ್. ಎಸ್. ದೊಡ್ಡಗೌಡರ ಮಾತನಾಡಿ, ಸರ್ಕಾರಿ ನೌಕರರಿಗೆ ವೇತನ ನೀಡುತ್ತಿಲ್ಲ. ಎಲ್ಲ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಕಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನ ಸಿಗುತ್ತಿಲ್ಲವೆಂದು ಅಕ್ರೋಷ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
     ವೇದಿಕೆಯಲ್ಲಿ ಶಾಸಕರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಜಿ.ಪಂ. ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಜಿಲ್ಲಾ ಉಪಾಧ್ಯಕ್ಷ ಮುತ್ತೆಪ್ಪ ಮನ್ನಾಪೂರ, ಮುತ್ತೆಪ್ಪ ಕುಳ್ಳೂರ, ಪರಸಪ್ಪ ಬಬಲಿ, ಪ್ರಮೋದ ನುಗ್ಗಾನಟ್ಟಿ, ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರು  ಉಪಸ್ಥಿತರಿದ್ದರು.

Spread the love

About Yuva Bharatha

Check Also

ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ-ಬಾಲಚoದ್ರ ಜಾರಕಿಹೊಳಿ!

Spread the loveಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ-ಬಾಲಚoದ್ರ ಜಾರಕಿಹೊಳಿ! ಗೋಕಾಕ: ಪ್ರಾಮಾಣಿಕವಾಗಿ ಸೇವೆ …

Leave a Reply

Your email address will not be published. Required fields are marked *

three − 1 =