Breaking News

20 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ-ಸಚಿವ ಗೋವಿಂದ ಕಾರಜೋಳ!

Spread the love

20 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ-ಸಚಿವ ಗೋವಿಂದ ಕಾರಜೋಳ!

ಯುವ ಭಾರತ ಸುದ್ದಿ ಇಂಡಿ: 20 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ.ಕಾವೇರಿಯಿಂದ ಭೀಮೆಯ ವರೆಗೂ ರಾಜ್ಯಾಧ್ಯಂತ ಕೆರೆ ತುಂಭಿಸುವ ಯೋಜನೆ ಜಾರಿಯಲ್ಲಿ ಇದೆ.ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿಗೆ ಆದ್ಯತೆ ನೀಡುವ ಉದ್ದೇಶದಿಂದ ೭೫೦೦ ಕೋಟಿ ರೂ.ಗಳನ್ನು ನೀರಾವರಿ ಯೋಜನೆಗೆ ಅಽವೇಶನದಲ್ಲಿ ಒಪ್ಪಿಗೆ ಪಡೆದುಕೊಂಡು ಸರ್ಕಾರ ಮಂಜೂರು ಮಾಡಿದೆ.ಅಖಂಡ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು,ಮುಂಬರುವ ೧೦ ವರ್ಷದಲ್ಲಿ ವಿಜಯಪುರ ಜಿಲ್ಲೆ ಕರ್ನಾಟಕದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆ ಆಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

 

ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಕೆರೆ ತುಂಬುವ ಕಾಮಗಾರಿಯ ಲೋಕಾರ್ಪಣೆ ಹಾಗೂ ಕೆರೆಗೆ ಬಾಗಿನ ಅರ್ಪಣೆ ಸಮಾರಂಭವನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು.

ಅವರು ಭಾನುವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆ,ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಮುಳವಾಡ ಏತ ನೀರಾವರಿ ಹಂತ-೩ರ ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ ಕಿ.ಮೀ.೪೮ ರಿಂದ ೬೫.೫೮ ರ ಪೈಪ್‌ಲೈನ್ ಜಾಲದಿಂದ ರಾಜನಾಳ(ಅಥರ್ಗಾ),ತಡವಲಗಾ,ಹಂಜಗಿ ಕೆರೆ ತುಂಬುವ ಕಾಮಗಾರಿಯ ಲೋಕಾರ್ಪಣೆ ಹಾಗೂ ಕೆರೆಗೆ ಬಾಗಿನ ಅರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಖಂಡ ವಿಜಯಪುರ ಜಿಲ್ಲೆ ಸಮಗ್ರ ಅಭಿವೃದ್ದಿಗೆ ಪಕ್ಷಾತೀತವಾಗಿ ಎಲ್ಲರು ಪ್ರಯತ್ನ ಮಾಡಬೇಕು.ರಾಜ್ಯದಲ್ಲಿ ೭೦ ಲಕ್ಷ ಎಕರೆ ಬೃಹತ್ ನೀರಾವರಿ ಇಲಾಖೆ,೭ ಲಕ್ಷ ಎಕರೆ ಪ್ರದೇಶಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.೧೬ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ರೈತರು ಸ್ವತ ತಾವೇ ಬೊರವೆಲ್,ಬಾವಿ ಕೊರೆಯಿಸಿ ನೀರಾವರಿ ಮಾಡಿಕೊಂಡಿದ್ದಾರೆ.ಯಾವ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಹೆಚ್ಚಿಗೆ ಇರುತ್ತದೆಯೊ ಆ ಪ್ರದೇಶ ಶ್ರೀಮಂತವಾಗಿರುತ್ತದೆ.ಹಿAದೆ ಟ್ಯಾಂಕರ್ ಮೂಲಕ ನೀರು ಪೊರೈಕೆ ಮಾಡಿರುವ ಪ್ರದೇಶಗಳಿಗೆ ಇಂದು ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿರುವುದರಿಂದ ರೈತರು ಕಬ್ಬು ಬೆಳೆದು ಆರ್ಥಿಕ ಪ್ರಗತಿ ಹೊಂದಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಅದರಲ್ಲಿ ಅಖಂಡ ವಿಜಯಪುರ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಅನುಧಾನ ಬಿಡುಗಡೆಗೆ ತೆರೆದ ಮನಸ್ಸಿನಿಂದ ಒಪ್ಪಿಗೆ ನೀಡುವ ಮೂಲಕ ಸಮಗ್ರ ನೀರಾವರಿಗೆ ಒತ್ತು ನೀಡಿರುವುದಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಅಥರ್ಗಾ ಗ್ರಾಮದ ೨೫೦ ಎಕರೆ ಪ್ರದೇಶದಲ್ಲಿನ ಕೆರೆಗೆ ನೀರು ತುಂಬಿಸಿದ್ದರಿAದ ಇಂದು ಅಥರ್ಗಾ ಗ್ರಾಮದಲ್ಲಿ ಗತವೈಭವ ಮತ್ತೆ ಬಂದAತೆ ಕಾಣುತ್ತಿದೆ.ನೀರಿಗಿಂತ ಮಿಗಿಲಾದ ವಸ್ತು ಬೇರಿಲ್ಲ.ನೀರನ್ನು ಸದ್ಭಳಕೆ ಮಾಡಿಕೊಂಡು ಶ್ರೀಮಂತರಾಗಬೇಕು.ಮನುಷ್ಯನ ದುರಾಸೆಯಿಂದ ಇಂದು ಭೂಮಿ ಒತ್ತುವರಿ ಮಾಡಿಕೊಳ್ಳುವುದು,ನೀರು ಅಶುದ್ದ ಮಾಡುವುದು ನಡೆದಿದೆ.ಪರಿಸರ ನಾಶ ಮಾಡಿದರೆ ಮನುಷ್ಯ ಅಷ್ಟೇ ಅಲ್ಲದೆ ಜೀವ ರಾಶಿಗೆ ಆಪತ್ತು ಬರುತ್ತದೆ.ಹೀಗಾಗಿ ಸರ್ಕಾರ ಈ ಕುರಿತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ ಕೆರೆ ತುಂಬುವ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿದರು.

ಕೆರೆಗೆ ಬಿಟ್ಟಿರುವ ನೀರನ್ನು ಉಪಯೋಗ ಮಾಡಿಕೊಂಡು ಶ್ರೀಮಂತರಾಗಬೇಕು.ಆದರೆ ಸರಾಯಿ ಅಂಗಡಿಗಳು ಹೆಚ್ಚಾಗಬಾರದು.ಸರಾಯಿ ಅಂಗಡಿಗಳು ಹೆಚ್ಚಾದರೆ ಶ್ರೀಮಂತಿಕೆ ಬೆಳೆಯುವುದಿಲ್ಲ,ಸಂಸ್ಕೃತಿ ಹಾಳಾಗುತ್ತದೆ.ಶ್ರೀಮಂತಿಕೆ ಸರಾಯಿ ಅಂಗಡಿಯ ಮೇಲೆ ಹೂಡುವ ಬಂಡವಾಳ ಆಗಬಾರದು ಎಂದು ಕಿವಿಮಾತು ಹೇಳಿದರು.
ಅಭಿವೃದ್ದಿ ವಿಷಯವೇ ಬೇರೆ,ರಾಜಕಾರಣವೇ ಬೇರೆ,ಅಭಿವೃದ್ದಿ ವಿಷಯದಲ್ಲಿ ಯಾರೇ ಹೇಳಿದರು ಚಾಚು ತಪ್ಪದೆ ಮಾಡುತ್ತಿದ್ದೇನೆ.ನಮ್ಮದ್ದು ಜನಪರವಾದ ಸರ್ಕರವಾಗಿದೆ.ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ.ಕೇವಲ ಶ್ರೀಮಂತರಿಗೆ ಹೋಗಲು ವಿಮಾನ ನಿಲ್ದಾಣ ಮಾಡಿರುವುದಿಲ್ಲ. ನಾಡಿನ ಸಂಪತ್ತು ಹೆಚ್ಚಾಗಲು,ಉದ್ಯೋಗ ದೊರೆಯಲು ವಿಮಾನ ನಿಲ್ದಾಣ ವಿಜಯಪುರದಲ್ಲಿ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಯಶವಂತರಾಯಗೌಡ ಪಾಟೀಲ,ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಕೆ.ಬೆಳ್ಳುಬ್ಬಿ,ಶೀಲವಂತ ಉಮರಾಣಿ,ಜಿ.ಕೆ.ಗೊಟ್ಯಾಳ,ಕಾಸುಗೌಡ ಬಿರಾದಾರ,ಸುವರ್ಣಾ ಶಿವೂರ,ಸಿಇಒ ರಾಹುಲ ಸಿಂಧೆ,ಅಣ್ಣಪ್ಪ ಖೈನೂರ,ಶ್ರೀಶೈಲಗೌಡ ಬಿರಾದಾರ,ನವೀನ ಅರಕೇರಿ,ಭೀಮಾಶಂಕರ ಬಿರಾದಾರ,ಅಣ್ಣಪ್ಪ ಮೇತ್ರಿ,ತಹಶೀಲ್ದಾರ ನಾಗಯ್ಯ ಹಿರೇಮಠ,ತಾಪಂ ಇಒ ಸುನೀಲ ಮದ್ದಿನ,ಗಿರೀಶ ಚಾಂದಕವಟೆ,ಶ್ರೀಶೈಲ ನಾಗಣಸೂರ,ಶಿವಾನಂದ ನಿಂಬಾಳ,ಜಾವೀದ ಮೋಮಿನ ಇತರರು ವೇದಿಕೆ ಮೇಲಿದ್ದರು.
ಹಣಮಂತ್ರಾಯಗೌಡ ಪಾಟೀಲ,ಅನೀಲ ಜಮಾದಾರ,ರವಿ ವಗ್ಗೆ,ಹುಚ್ಚಪ್ಪ ತಳವಾರ,ಸತೀಶ ಕುಂಬಾರ,ಸುದೀರ ಕರಕಟ್ಟಿ,ಉಮೇಶ ದೇಗಿನಾಳ,ಅವಿನಾಶ ಬಗಲಿ,ಶಿವು ಬಿಸನಾಳ,ದತ್ತಾ ಬಂಡೆನವರ,ಅಶೋಕಗೌಡ ಬಿರಾದಾರ,ಸಚೀನ ಬೊಳೆಗಾಂವ,ಸುನೀಲ ರಬಶೆಟ್ಟಿ,ಗಣಪತಿ ಬಾಣಿಕೋಲ,ಮಡಿವಾಳಪ್ಪ ಕಡಕೋಳ,ಸಿದ್ದರಾಮ ಲೊಣಿ,ಪ್ರಕಾಶ ಹಿಟ್ನಳ್ಳಿ,ಬಸು ಕನ್ನೂರ,ಅಶೋಕಗೌಡ ಪಾಟೀಲ,ವಿದ್ಯಾಧರ ಜೇವೂರ,ಮಂಜು ನೀಲವಾಣಿ,ಹುಸನಪ್ಪ ಬಾಣಿಕೋಲ,ಸತೀಶ ಜಿಗಜಿಣಗಿ,ಧರ್ಮು ಮದರಖಂಡಿ,ಪ್ರವೀಣ ಮಠ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.
ಇದಕ್ಕೂ ಮುಂಚೆ ರಾಜನಾಳ(ಅಥರ್ಗಾ) ಕೆರೆಗೆ ಬಾಗಿನ ಅರ್ಪಿಸಲಾಯಿತು.ನಂತರ ಸಾವಿರಾರು ಸುಮಂಗಲೆಯರ ಕುಂಭ ಮೆರವಣಿಗೆಯೊಂದಿಗೆ ಸಚಿವ ಗೋವಿಂದ ಕಾರಜೋಳ,ಸಂಸದ ರಮೇಶ ಜಿಗಜಿಣಗಿ,ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಟ್ಯಾಕ್ಟರ್‌ದಲ್ಲಿ ರೈತರ ಟೋಪಿ,ಟಾವೆಲ್ ಧರಿಸಿ ಮೆರವಣಿಗೆ ಮಾಡಲಾಯಿತು.ನಂತರ ಕೆರೆಗೆ ನೀರು ತುಂಬಿಸಲು ಕಾರಣಿಕರ್ತರಾದ ಮೂವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.


Spread the love

About Yuva Bharatha

Check Also

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!

Spread the loveಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.! ಗೋಕಾಕ: ಹುಬ್ಬಳ್ಳಿಯಲ್ಲಿ …

Leave a Reply

Your email address will not be published. Required fields are marked *

6 + 17 =