ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ದೇವಸ್ಥಾನದ ಕಂಪೌಂಡಗೆ ಶಾಸಕಿ ಹೆಬ್ಬಾಳಕರ ಬ್ಯಾನರ್ ಅಳವಡಿಕೆ!

ಯುವಭಾರತ ಸುದ್ದಿ
ಬೆಳಗಾವಿ: ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರು ಸಹ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭಾವಚಿತ್ರವಿರುವ ಬ್ಯಾನರ್ ರಾರಾಜಿಸುತ್ತಿದ್ದು ಚುನಾವಣಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರಾ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತುಮ್ಮರಗುದ್ದಿ ಗ್ರಾಮದ ಯಲ್ಲಮ್ಮ ದೇವಸ್ಥಾನದ ಕಂಪೌಂಡಗೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪೋಸ್ಟರ್ ರಾರಾಜಿಸುತ್ತಿದ್ದು, ಅದರಲ್ಲಿ ಲೋಕೋಪಯೋಗಿ ಇಲಾಖೆ ಬೆಳಗಾವಿ ವಿಭಾಗ ಎಂದು ನಮೂದಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಸ್ಥಳೀಯ ಗ್ರಾಪಂದವರು ಜನಪ್ರತಿನಿಧಿಗಳ ಬ್ಯಾನರ್ ಮತ್ತು ಪೋಸ್ಟರ್ಗಳನ್ನು ತೆರವುಗೊಳಿಸಬೇಕು. ಆದರೆ ಗ್ರಾಪಂದವರು ತೆರವುಗೊಳಿಸುವ ಕಾರ್ಯ ಮಾಡದಿರುವದು ಕೆಲವು ಅನುಮಾನ ಹುಟ್ಟಿಸಿವೆ. ಗ್ರಾಮದ ರಸ್ತೆ ಸುಧಾರಣೆ ಕಾಮಗಾರಿ ಕುರಿತು ಈ ಪೋಸ್ಟ ಬ್ಯಾನರ್ ಅಳವಡಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕರ ಮತ್ತು ಅಧಿಕಾರಿಗಳ ಮೇಲೆ ಚುನಾವಣಾ ಅಧಿಕಾರಿಗಳ ಕ್ರಮಕೈಗೊಳ್ಳುವರೆ ಎಂಬುದು ಕಾದು ನೋಡಬೇಕಿದೆ.
YuvaBharataha Latest Kannada News