Breaking News

ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನ ದೊರೆಯದಿರುವದು ಸಮಾಜಕ್ಕೆ ಆದ ಅನ್ಯಾಯ-ಡಾ.ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ

Spread the love

ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನ ದೊರೆಯದಿರುವದು ಸಮಾಜಕ್ಕೆ ಆದ ಅನ್ಯಾಯ-ಡಾ.ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ


ಗೋಕಾಕ: ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನ ದೊರೆಯದಿರುವದು ಸಮಾಜಕ್ಕೆ ಆದ ಅನ್ಯಾಯವಾಗಿದ್ದು ಅದನ್ನು ಸರಿಪಡಿಸುವಂತೆ ಹೊಸದುರ್ಗದ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿಯವರು ಹೇಳಿದರು.
ಅವರು, ಬುಧವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತ ಸಮಾನ್ಯ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಶಾಸಕ ಪುಟ್ಟರಂಗ ಶೆಟ್ಟಿಯವರಿಗೆ ಸಚಿವ ಸ್ಥಾನ ದೊರೆಯಬೇಕಿತ್ತು. ಇದರಿಂದ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು. ಸರಕಾರ ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಹೊಸದುರ್ಗದ ಶ್ರೀಮಠದಲ್ಲಿ ೬೦ಅಡಿ ಎತ್ತರದ ಶ್ರೀ ಭಗೀರಥ ಮಹಾರಾಜರ ಮೂರ್ತಿಯನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ದೇಶದಲ್ಲಿಯೇ ಅತಿ ಎತ್ತರದ ಭಗೀರಥ ಮೂರ್ತಿಯಾಗಲಿದೆ. ಎಲ್ಲ ಧರ್ಮಗಳ ಸಮನ್ವಯತೆ ತರುವ ಉದ್ಧೇಶವನ್ನು ಶ್ರೀಮಠ ಹೊಂದಿದ್ದು ಅಂತಹ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗೋಕಾಕದಲ್ಲೂ ಶಾಖಾ ಮಠವನ್ನು ಶೀಘ್ರದಲ್ಲಿ ಪ್ರಾರಂಭಿಸಿ ಈ ಭಾಗದ ಸಮುದಾಯದವರ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಧಾರ್ಮಿಕ ಜಾಗೃತಿ ಮೂಢಿಸಲು ಶ್ರಮಿಸಲಾಗುವದು ಎಂದು ಹೇಳಿದ ಅವರು ಕುಲಶಾಸ್ತç ವರದಿ ಸರಕಾರಕ್ಕೆ ತಲುಪಿದ ನಂತರ ಉಪ್ಪಾರ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಲು ಹೋರಾಟ ನಡೆಸಲಾಗುವದು ಎಂದು ತಿಳಿಸಿದರು.
ಈ ಗೋಷ್ಠಿಯಲ್ಲಿ ಶ್ರೀ ಭಗೀರಥ ಉಪ್ಪಾರ ಸಂಘದ ತಾಲೂಕು ಉಪಾಧ್ಯಕ್ಷರುಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ಮುಖಂಡರುಗಳಾದ ಮಲ್ಲಿಕಾರ್ಜುನ ಚೌಕಾಶಿ, ಬಸವರಾಜ ಖಾನಪ್ಪನವರ, ಭೀಮಶಿ ಭರಮನ್ನವರ, ಮಾಯಪ್ಪ ತಹಶೀಲದಾರ, ವಿಠ್ಠಲ ಮೆಳವಂಕಿ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

seven + eleven =