ಬೋಗಸ್ ಬಜೇಟ್ ಶ್ರಮಿಕ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಈ ಬಜೇಟ್ನಲ್ಲಿ ಏನೇನು ಇಲ್ಲ.- ರಾಜೇಂದ್ರ ಗೌಡಪ್ಪಗೋಳ.!

ಗೋಕಾಕ: ರಾಜ್ಯ ಸರಕಾರ ಮಂಡಿಸಿದ ಬಜೇಟ್ ಬೋಗಸ್ ಬಜೇಟ್ ಶ್ರಮಿಕ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಈ ಬಜೇಟ್ನಲ್ಲಿ ಏನೇನು ಇಲ್ಲ ಎಂದು ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಸಿಎಮ್ ಸಿದ್ಧರಾಮಯ್ಯ ಮಂಡಿಸಿದ ಬಜೇಟನಲ್ಲಿ ಹುರುಳಿಲ್ಲ. ಜನರು ಬರಗಾಲದಿಂದಾಗಿ ತತ್ತರಿಸಿ ಹೋಗಿದ್ದಾರೆ. ರೈತರ ಕಣ್ಣೋರೆಸಬೇಕಾದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೋಡಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಈ ಬಾರಿಯೂ ವಿಶೇಷ ಪ್ಯಾಕೇಜ ಘೋಷಣೆ ಮಾಡದೆ ಮಲತಾಯಿ ಧೋರಣೆ ತಾಳಿದೆ ಎಂದು ತಿಳಿಸಿದ್ದಾರೆ.
YuvaBharataha Latest Kannada News